ಶುಕ್ರವಾರ, ಮೇ 19, 2023

ಜವಾಹರ ನವೋದಯ ವಿದ್ಯಾಲಯ; ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಬಳ್ಳಾರಿ,ಮೇ 19(ಕರ್ನಾಟಕ ವಾರ್ತೆ): ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 2023-24 ನೇ ಸಾಲಿನ ಪ್ರಥಮ ಪಿಯುಸಿ (11 ತರಗತಿ) ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು navoday.gov.in ವೆಬ್‍ಸೈಟ್‍ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿರುತ್ತದೆ. ಪರೀಕ್ಷೆ ನಡೆಯುವ ದಿನಾಂಕ ಜುಲೈ 22 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.08391-223237 ಗೆ ಸಂಪರ್ಕಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಎ.ಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ