ಗುರುವಾರ, ಮೇ 18, 2023
ಲಿಡ್‍ಕರ್; ಪಾದರಕ್ಷೆ, ಚರ್ಮ ವಸ್ತುಗಳು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ
ಬಳ್ಳಾರಿ,ಮೇ 18(ಕರ್ನಾಟಕ ವಾರ್ತೆ):
ಡಾ.ಬಾಬು ಜಗನ್‍ಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ತಯಾರಿಸಿದ ಉತ್ತಮ ಗುಣಮಟ್ಟದ ಪಾದರಕ್ಷೆಗಳು ಹಾಗೂ ಚರ್ಮ ವಸ್ತುಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಏರ್ಪಡಿಸಲಾಗಿದೆ.
*ಮಾರಾಟ ಸ್ಥಳ:* ಬುಡಾ ಕಾಂಪ್ಲೆಕ್ಸ್‍ನ ಲಿಡ್‍ಕರ್ ಲೆದರ್ ಎಂಪೋರಿಯಮ್, ಶಾಪ್ ನಂ:24 ರಲ್ಲಿ ಮಾರಾಟ ಮಳಿಗೆಯಲ್ಲಿ ಏರ್ಪಡಿಸಲಾಗಿದ್ದು, ಮೇ 18 ರಿಂದ ಜೂ.04 ರವರೆಗೆ ಮಾರಾಟ ಅವಕಾಶ ಕಲ್ಪಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ತಯಾರಿಸಿದ ಉತ್ತಮ ಗುಣಮಟ್ಟದ ಪಾದರಕ್ಷೆಗಳು ಹಾಗೂ ಚರ್ಮ ವಸ್ತುಗಳು ಸಾರ್ವಜನಿಕರಿಗೆ ನೇರವಾಗಿ ರಿಯಾಯಿತಿ ದರದ ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶವಿರುತ್ತದೆ.
ಸಮಯ; ಬೆಳಗ್ಗೆ 10 ರಿಂದ ಮಧ್ಯಾಹ್ನ 02 ರವರೆಗೆ ಮತ್ತು ಸಂಜೆ 04 ರಿಂದ 08 ರವರೆಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ದೂ. 9480886274, 984466769 ಗೆ ಸಂಪರ್ಕಿಸಬಹುದು ಎಂದು ಲಿಡ್‍ಕರ್‍ನ ಜಿಲ್ಲಾ ಸಂಯೋಜಕ ಸಂಜೀವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ