ಬುಧವಾರ, ಮೇ 17, 2023

ರಸ್ತೆ ಅಭಿವೃದ್ಧಿ ಕಾಮಗಾರಿ; 425 ಮರಗಳ ತೆರವು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ ಬಳ್ಳಾರಿ,ಮೇ 17(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆಯಿಂದ ಕುವೆಂಪು ನಗರದ ಮುಖ್ಯರಸ್ತೆಯ ಮೂಲಕ ಹೊಸಪೇಟೆ ರಸ್ತೆಗೆ 1.83 ಕಿ.ಮೀ. ರಸ್ತೆ ಅಂದರೆ ರಾಷ್ಟ್ರೀಯ ಹೆದ್ದಾರಿ 150 ರಿಂದ 63 ಕ್ಕೆ ಸೇರುವ ಹೊರ ವರ್ತುಲ ರಸ್ತೆ 3.37 ಕಿ.ಮೀ. ಹಾಗೂ 5.20 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಅರಣ್ಯ ಇಲಾಖೆಯಿಂದ ಬೆಳೆಸಿದ 425 ವಿವಿಧ ಜಾತಿಯ ಮರಗಳನ್ನು ತೆರವು ಮಾಡಲಾಗುತ್ತಿದ್ದು, ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ರಸ್ತೆಗಳ ವಿವರ:* ಬಳ್ಳಾರಿ ನಗರದ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆಯಿಂದ ಕುವೆಂಪು ನಗರದ ಮುಖ್ಯರಸ್ತೆಯ ಮೂಲಕ ಹೊಸಪೇಟೆ ರಸ್ತೆಗೆ 1.83 ಕಿ.ಮೀ ರಸ್ತೆ ಅಂದರೆ ರಾಷ್ಟ್ರೀಯ ಹೆದ್ದಾರಿ 150 ರಿಂದ 63 ಕ್ಕೆ ಸೇರುವ ಹೊರ ವರ್ತುಲ ರಸ್ತೆ 3.37 ಕಿ.ಮೀ ಹಾಗೂ 5.20 ಕಿ.ಮೀ ರಸ್ತೆಯವರೆಗೆ 425 ಮರಗಳು ತೆರವು ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿ 425 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಲು ಕೋರಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಮೇರೆಗೆ ಬಳ್ಳಾರಿ ಉಪ ವಿಭಾಗದ ವಲಯ ಅರಣ್ಯಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ರಸ್ತೆಯ ಬದಿಯ ಮರಗಳನ್ನು ಕುಲಂಕುಷವಾಗಿ ಪರಿಶೀಲಿಸಿ, ರಸ್ತೆ ಅಗಲೀಕರಣಕ್ಕೆ ಮರಗಳ ಕಟಾವಣೆ ಪ್ರಕ್ರಿಯೆಯನ್ನು ಜರುಗಿಸಲಾಗುತ್ತದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಮರಗಳ ಕಟಾವಣೆ ಪ್ರಕ್ರಿಯೆಯಲ್ಲಿ ಯಾರಿಗಾದರೂ ಮತ್ತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಮೇ 25 ರೊಳಗಾಗಿ ಲಿಖಿತ ಪತ್ರ ಅಥವಾ ಮೇಲ್ (ಇ-ಮೇಲ್ ಐಡಿ:dcfbellaryt@gmail.com) ಮೂಲಕ ನಗರದ ರೇಡಿಯೋ ಪಾರ್ಕ್‍ನ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.08392-240797 ಗೆ ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ