ಮಂಗಳವಾರ, ಮೇ 9, 2023

ಬಳ್ಳಾರಿ ನಗರ ವಿಧಾನಸಭಾ ಚುನಾವಣೆ: ವಯೋವೃದ್ಧರು, ವಿಕಲಚೇತನರಿಗೆ ಮತದಾನ ಮಾಡಲು ವಾಹನ ವ್ಯವಸ್ಥೆ ಬಳ್ಳಾರಿ,ಮೇ 09(ಕರ್ನಾಟಕ ವಾರ್ತೆ): ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರ ಅಂಗವಾಗಿ ಮೇ 10 ರಂದು ನಡೆಯುವ ಮತದಾನ ದಿನದಂದು 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ನಗರ ವ್ಯಾಪ್ತಿಯಲ್ಲಿ ಬರುವ ಮತದಾರರ ಪೈಕಿ ವಯೋವೃದ್ದರು, ನಿಶ್ಯಕ್ತಿ ಹೊಂದಿರುವವರು ಮತ್ತು ವಿಶೇಷ ಚೇತನರರು ಮನೆಯಿಂದ ಮತಗಟ್ಟೆಗೆ ಬಂದು ಮತ ಹಾಕಿ ಹೋಗಲು ಆಗದಿರುವವರಿಗೆ ಮಹಾನಗರ ಪಾಲಿಕೆಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಮೇ 10 ರಂದು ನಡೆಯುವ ಮತದಾನ ದಿನದಂದು ಬೆಳಗ್ಗೆ 07 ರಿಂದ ಸಂಜೆ 06 ರವರೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ವಾಹನಗಳು ಮಹಾನಗರ ಪಾಲಿಕೆ ಆವರಣದಲ್ಲಿ ಇರುತ್ತವೆ. ಅರ್ಹ ಮತದಾರರು ಮನೆಯಿಂದ ಮತಗಟ್ಟೆಗೆ ಬಂದು ಮತಹಾಕಲು ಬಯಸಿದಲ್ಲಿ ಈ ಕೆಳಕಂಡ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. *ಸಂಪರ್ಕಿಸಬೇಕಾದ ವ್ಯಕ್ತಿಗಳ ವಿವರ:* ಸಲಾಂಸಾಬ್ ಅವರ ಮೊ.7411799678, ಶಾಂತಿ ಅವರ ಮೊ.8884328120, ರೂಪ ಅವರ ಮೊ.9035042385 ಹಾಗೂ ಮಹಾಂತೇಶ್ ಅವರ ಮೊ.8073484060 ಗೆ ಇವರನ್ನು ಸಂಪರ್ಕಿಸಿದರೆ ವಾಹನ ಮೂಲಕ ತಮ್ಮ ಮನೆಯಿಂದ ಮತಗಟ್ಟೆ ಕರೆದುಕೊಂಡು ಹೋಗಿ ಮತದಾನದ ನಂತರ ನೇರವಾಗಿ ಮನೆಗೆ ತಲುಪಿಸುತ್ತಾರೆ ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್ ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ