ಶುಕ್ರವಾರ, ಅಕ್ಟೋಬರ್ 6, 2023

ಅ.08ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಅ.06(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ದಕ್ಷಿಣ ಉಪಕೇಂದ್ರದಿಂದ ಹೊರಡುವ ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗ ಮತ್ತು ಎಫ್-26 ಚರಕುಂಟ ಐ.ಪಿ ಫೀಡರ್‍ಗಳ ಸ್ಥಳಾಂತರ ಕಾರ್ಯ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಅ.08ರಂದು ಬೆಳಿಗ್ಗೆ 10ರಿಂದ ಸಂಜೆ 05ರವರೆಗೆ ಈ ವ್ಯಾಪ್ತಿಯ ಮಿಂಚೇರಿ ಗ್ರಾಮ, ಸಂಜೀವರಾಯನ ಕೋಟೆ ಗ್ರಾಮ, ಮುಂಡರಗಿ ಗ್ರಾಮ, ಚರಕುಂಟೆ ಗ್ರಾಮ ಹಾಗೂ ವೈ.ಬೂದಿಹಾಳ್ ಕೃಷಿ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಮೋಹನಬಾಬು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ