ಗುರುವಾರ, ಅಕ್ಟೋಬರ್ 5, 2023
ಹೊರಗುತ್ತಿಗೆ ಆಧಾರದ ಮೇಲೆ ಫಿಜಿಯೋಥೆರಪಿಸ್ಟ್ ವೈದ್ಯೆ, ಮಹಿಳಾ ಸಹಾಯಕಿ ನೇಮಕಾತಿ
ಬಳ್ಳಾರಿ,ಅ.05(ಕರ್ನಾಟಕ ವಾರ್ತೆ):
ಬಳ್ಳಾರಿ ಪೂರ್ವವಲಯ ಹಾಗೂ ಕುರುಗೋಡು ಪಶ್ಚಿಮವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ವಿಶೇಷ ಮಕ್ಕಳಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಒಂದು ವಲಯಕ್ಕೆ ಒಬ್ಬರಂತೆ ಫಿಜಿಯೋಥೆರಪಿಸ್ಟ್ 02 ವೈದ್ಯರ ಹುದ್ದೆ ಹಾಗೂ ವೈದ್ಯರ ಸಹಾಯಕ್ಕಾಗಿ ಇಬ್ಬರು ಮಹಿಳಾ ಸಹಾಯಕಿಯರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ವೈದ್ಯರ ಹುದ್ದೆಗೆ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಥವಾ ಡಿಪ್ಲೋಮಾ ಆಫ್ ಫಿಜಿಯೋಥೆರಪಿ ಆಗಿರಬೇಕು ಮತ್ತು ಮಹಿಳಾ ಸಹಾಯಕಿ ಹುದ್ದೆಗೆ 7ನೇ ತರಗತಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಕಚೇರಿ, ಪಶ್ಚಿಮವಲಯ, ಬಳ್ಳಾರಿ ಇಲ್ಲಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 07 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಪೂರ್ವವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮೊ.9916356333 ಹಾಗೂ ಕುರುಗೋಡು ಪಶ್ಚಿಮವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೊ.8867227805 ಗೆ ಸಂಪರ್ಕಿಸಬಹುದಾಗಿದೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ