ಶುಕ್ರವಾರ, ಅಕ್ಟೋಬರ್ 6, 2023

ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಬಳ್ಳಾರಿ,ಅ.06(ಕರ್ನಾಟಕ ವಾರ್ತೆ): ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಅವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಅ.07 ಮತ್ತು 08ರಂದು ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಳ್ಳುವರು. ಅ.07ರಂದು ಬೆಳಿಗ್ಗೆ 09ಕ್ಕೆ ಸಂಡೂರಿನಿಂದ ಜೆಎಸ್‍ಡಬ್ಲ್ಯೂ ವಿದ್ಯಾನಗರ ಮಾರ್ಗವಾಗಿ ಬಳ್ಳಾರಿಗೆ ಆಗಮಿಸಲಿದ್ದು, ಬೆಳಿಗ್ಗೆ 10ರಿಂದ ನಗರದ ಕಂಟೋನ್‍ಮೆಂಟ್‍ನ ರೈಲ್ವೇ ನಿಲ್ದಾಣದಿಂದ ಎಸ್‍ಪಿ ವೃತ್ತದವರೆಗೆ ಬೃಹತ್ ಬೈಕ್ ರ್ಯಾಲಿಯಲ್ಲಿ ಭಾಗವಹಿಸುವರು. ಬಳಿಕ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12ರಿಂದ 01ರವರೆಗೆ ಜಿಲ್ಲಾ ಕಾಂಗ್ರೇಸ್ ಕಚೇರಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 01ರಿಂದ 02ರವರೆಗೆ ಜಿಲ್ಲಾ ಪಂಚಾಯತ್‍ನ ನಜೀರ್ ಸಾಬ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಬಳಿಕ ಮಧ್ಯಾಹ್ನ 03 ರಿಂದ ಸಂಜೆ 04 ರವರೆಗೆ ಮಾಲೀಕ ವರ್ಗದ ಸಂಘಟನೆಗಳ/ ಆಡಳಿತ ವರ್ಗದವರ ಜೊತೆ ಸಭೆ ನಡೆಸುವರು. ಸಂಜೆ 04 ರಿಂದ 05 ರವರೆಗೆ ಕಾರ್ಮಿಕ ಸಂಘಟನೆಗಳ ಸಭೆ ನಡೆಸುವರು. ಸಂಜೆ 06ಕ್ಕೆ ಸಂಡೂರಿನಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಜೆಎಸ್‍ಡಬ್ಲ್ಯೂನ ಮ್ಯಾರಿಯೇಟ್‍ನಲ್ಲಿ ವಾಸ್ತವ್ಯ ಮಾಡುವರು. ಅ.08ರಂದು ಬೆಳಿಗ್ಗೆ 09ಕ್ಕೆ ಜೆಎಸ್‍ಡಬ್ಲ್ಯೂನ ಮ್ಯಾರಿಯೇಟ್‍ನಿಂದ ಹೊರಟು, 09.45ಕ್ಕೆ ಕುರುಗೋಡಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12ಕ್ಕೆ ಬಳ್ಳಾರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರ ಜೊತೆ ಸಭೆ ನಡೆಸುವರು. ಮಧ್ಯಾಹ್ನ 03ಕ್ಕೆ ಬಳ್ಳಾರಿಯಿಂದ ನಿರ್ಗಮಿಸಿ, ಜಿಂದಾಲ್ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪಿ.ಕುಮಾರ್ ಅವರು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ