ಮಂಗಳವಾರ, ಅಕ್ಟೋಬರ್ 3, 2023

ಯುವಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಅ.03(ಕರ್ನಾಟಕ ವಾರ್ತೆ): ನಗರದ ಸಿದ್ಧಾರ್ಥ ಕಾಲೋನಿಯ ಹುಲಿಗೆಮ್ಮ ಗುಡಿ ಹತ್ತಿರ ನಿವಾಸಿ ಎ.ಪವನ್ ಕುಮಾರ್ ಎನ್ನುವ 20 ವರ್ಷದ ಯುವಕ ಸೆ.30ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಯುವಕನ ಚಹರೆ ಗುರುತು: ಎತ್ತರ 5.4 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ತಿಳಿ ಹಳದಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ದೂ.08392-276461, ಮೊ.9480803049, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದಾಗಿದೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ