ಮಂಗಳವಾರ, ಜನವರಿ 2, 2024
ಕುರುಗೋಡು: ಜ.03ರಿಂದ 10ರ ವರೆಗೆ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜ.02(ಕರ್ನಾಟಕ ವಾರ್ತೆ):
ಕುರುಗೋಡು ನಗರ ಪ್ರದೇಶದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಕೈಗೊಳ್ಳಲಾಗುತ್ತಿರುವುದರಿಂದ ಕುರುಗೋಡು ನಗರ ಪ್ರದೇಶ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜ.03 ರಿಂದ 10 ರ ವರೆಗೆ ಬೆಳಿಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-2 ಫೀಡರ್‍ನ ಗೆಣಿಕೆಹಾಳ್ ಐಪಿ ಫೀಡರ್(ಎಫ್-14 ಫೀಡರ್) ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್ ಗ್ರಾಮಗಳು. ಎಫ್-5 ಫೀಡರ್‍ನ ಸಿಂಧಿಗೇರಿ ಐ.ಪಿ ಮಾರ್ಗದ ಬೈಲೂರು ಗ್ರಾಮ. ಎಫ್-7 ಫೀಡರ್‍ನ ಬಾದನಹಟ್ಟಿ ಐ.ಪಿ ಮಾರ್ಗದ ಬಾದನಹಟ್ಟಿ, ವದ್ದಟ್ಟಿ, ಯರ್ರಂಗಳಿ, ಸಿಂಧಿಗೇರಿ, ಮಲ್ಲೇಶ್ವರಿ ಕ್ಯಾಂಪ್. ಎಫ್-8 ಫೀಡರ್‍ನ ಎಲ್.ಐ.ಎಸ್ ಎನ್.ಜೆ.ವೈ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಕ್ಯಾದಿಗೆಹಾಳ್, ಬಸವಪುರ ಗ್ರಾಮಗಳು. ಎಫ್-1 ಫೀಡರ್‍ನ ಕುರುಗೋಡು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೋಹನ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ