ಬುಧವಾರ, ಜನವರಿ 3, 2024

ಬಳ್ಳಾರಿಯಲ್ಲಿ ಗರಿಗೆದರಿದ ಯುವಸಂಭ್ರಮ ಜ.06ರಿಂದ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

ಬಳ್ಳಾರಿ,ಜ.03(ಕರ್ನಾಟಕ ವಾರ್ತೆ): “ಯುವ ಜನೋತ್ಸವ” ಈ ಪದದಲ್ಲೇ ಅದೆಷ್ಟು ಸಂತೋಷ ಸಂಭ್ರಮಗಳಿವೆ! ನಮ್ಮ ದೇಶದ ಯುವ ಕಣ್ಮಣಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ಕಾರ್ಯಕ್ರಮ ಸಂಘಟಿಸುವ ಸಂಕಲ್ಪ ಮಾಡಿರುವುದರಿಂದ ಈ ಪದದ ಅರ್ಥಕ್ಕೆ ಮತ್ತಷ್ಟು ಗೌರವ ಅಭಿಮಾನಗಳು ಕೂಡಿಕೊಂಡಿವೆ. ಸ್ವಾಮಿ ವಿವೇಕಾನಂದ ಹೆಸರೇ ಹಾಗೆ, ಅವರ ಜೀವನ ಸಂದೇಶಗಳನ್ನು ಧ್ಯೇಯ ಆದರ್ಶಗಳನ್ನು, ಓದಿ ಅರ್ಥೈಸಿಕೊಂಡಿರುವವರ ಪಾಲಿಗೆ ಅವರೊಂದು ಅದ್ಬುತ ವಿಸ್ಮಯ. ಓದಬಯಸಿ ವಿವೇಕ ಪಥದಲ್ಲಿ ಹೆಜ್ಜೆಯಿರಿಸುವವರಿಗೆ ಕುವೆಂಪು ಅವರು ಹೇಳುವಂತೆ, “ಸ್ವಾಮಿ ವಿವೇಕಾನಂದರ ತಪೆÇೀವಾಣಿ ಒಂದು ಅಮೃತದ ಮಡು. ಮಿಂದರೆ ಪುನೀತರಾಗುತ್ತೇವೆ, ಒಂದು ಜ್ಯೋತಿಯ ಖನಿ, ಹೊಕ್ಕರೆ ಪ್ರಬುದ್ದರಾಗುತ್ತೇವೆ” ಎನ್ನುವ ಭಾವಗೌರವ. ವಿವೇಕ ತಪೆÇೀವಾಣಿಯ ದಿವ್ಯ ಸಂದೇಶಗಳನ್ನು ಮನದಾಳಕ್ಕೆ ತೆಗೆದುಕೊಂಡರೆ ಪಾವನತೆ, ಪ್ರಬುದ್ಧತೆಗಳು ತಮಗೆ ತಾವೇ ಇಡೀ ವ್ಯಕ್ತಿತ್ವವನ್ನು ಆವರಿಸಿಕೊಂಡುಬಿಡುತ್ತವೆ. ಇನ್ನು ಅವರ ಧ್ಯೇಯ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆ ಬದುಕುಗಳು ನಾಡಿನ ಅಪೂರ್ವ ವರದಾನ ಆಗಿಬಿಡುವಲ್ಲಿ ಸಂದೇಹವೇ ಇಲ್ಲ. ನಮ್ಮ ರಾಷ್ಟ್ರದ ಯುವಜನರ ಬದುಕುಗಳೆಲ್ಲಾ ಹೀಗೆ, ಅವರವರ ಅಂತರಂಗವನ್ನು ಅವರೇ ಜಯಿಸಿಕೊಂಡು ಅವರವರ ಭವಿಷ್ಯವನ್ನು ಅವರವರೇ ರೂಪಿಸಿಕೊಳ್ಳುವ ಅತ್ಯುತ್ತಮ ಶಿಲ್ಪಿಗಳಾಗಬೇಕೆಂಬುದೇ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಆಶಯ. ಇದಕ್ಕಾಗಿ ಯುವಜನರ ರಾಷ್ಟ್ರೀಯ ಐಕಾನ್ ಎಂದು ಸ್ವಾಮಿ ವಿವೇಕಾನಂದರನ್ನು ಘೋಷಿಸಿ, ಅವರ ಹೆಸರಿನಲ್ಲಿ ರಾಷ್ಟ್ರೀಯ, ರಾಜ್ಯ ಯುವ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಅವರ ಜನ್ಮದಿನ ಜನವರಿ 12 ಅನ್ನು ‘ರಾಷ್ಟ್ರೀಯ ಯುವ ದಿನ' ಎಂದು ಆಚರಿಸಲಾಗುತ್ತಿದೆ. ಅಲ್ಲದೇ ಜನವರಿ 12 ರಿಂದ 18ರ ವರೆಗೆ ಒಂದು ವಾರಗಳ ಕಾಲ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಹಕಾರದಿಂದ ‘ಯುವಸಪ್ತಾಹ'ವನ್ನು ನಾಡಿನ ಎಲ್ಲೆಡೆಯೂ, ಹಳ್ಳಿಗಳ ಮೂಲೆ ಮೂಲೆಗಳಲ್ಲೂ ಈ ಕಾರ್ಯಕ್ರಮದ ಮಹತ್ವ ಪ್ರತಿಧ್ವನಿಸುವಂತೆ ಆಯೋಜಿಸಲಾಗುತ್ತಿದೆ. ‘ಯುವಜನೋತ್ಸವ'ದಲ್ಲಿ ಸಂಘಟಿತವಾದ ಸಾಂಸ್ಕøತಿಕ ಮತ್ತು ಸೃಜನಶೀಲ ಕಲೆಗಳ ಸ್ಪರ್ಧೆಗಳಲ್ಲಿ ನಮ್ಮ ಯುವಜನರ ಸಂಸ್ಕøತಿ ಪರಂಪರೆಗಳ ಕೆನೆಸಾರಗಳು ಸುವ್ಯಕ್ತವಾಗಿವೆ. ಈ ಮೊದಲು ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ವಾದ್ಯಗಳು, ಜನಪದ ನೃತ್ಯ, ಜನಪದ ಗೀತೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಯುವಪ್ರತಿಭೆ ಅನಾವರಣವಾಗುತ್ತಿತ್ತು. ಈ ವರ್ಷದ ಬದಲಾವಣೆಯಲ್ಲಿ ಜನಪದ ಗೀತೆ, ನೃತ್ಯಗಳಿಗೆ ಅಗ್ರಸ್ಥಾನ ದೊರೆತಿದೆ. ಜೊತೆಗೆ ಭಾಷಣ ಸ್ಪರ್ಧೆ, ಕಥೆ ಬರೆಯುವ ಸ್ಪರ್ಧೆ, ಛಾಯಾಚಿತ್ರಗ್ರಹಣ, ಪೆÇೀಸ್ಟರ್ ತಯಾರಿಕೆಗಳಂತಹ ಸೃಜನಶೀಲ ಆಯಾಮಗಳು ಅವಕಾಶ ಪಡೆದಿವೆ. ಜ.06ರಿಂದ ಎರಡು ದಿನಗಳ ಕಾಲ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಅಧಿಕ ಯುವಪ್ರತಿಭೆಗಳು ಬಳ್ಳಾರಿಗೆ ಆಗಮಿಸಲಿದ್ದಾರೆ. ಈ ಸಾಂಸ್ಕøತಿಕ ರಾಯಭಾರಿಗಳನ್ನು ಗಣಿನಾಡು ಬಳ್ಳಾರಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತಾ ಅವರಿಗೆಲ್ಲ ಹಾರ್ದಿಕ ಅಭಿನಂದನೆಗಳನ್ನು ಯುವಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಸಲ್ಲಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ