ಬಳ್ಳಾರಿ,ಜ.12(ಕರ್ನಾಟಕ ವಾರ್ತೆ):
ರೋಗಿಗಳಿಗೆ ಸಮರ್ಪಕ ರೀತಿಯಲ್ಲಿ ಚಿಕಿತ್ಸೆ ಹಾಗೂ ಆಡಳಿತಾತ್ಮಕ ದೃಷ್ಠಿಯಿಂದ ಸುವಿಶೇಷ ವಿಭಾಗವಾದ ಮೂತ್ರಕೋಶ ವಿಭಾಗವನ್ನು ಜ.15 ರಿಂದ ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗುವುದು ಎಂದು ವಿಮ್ಸ್ ನಿರ್ದೇಶಕ ಮತ್ತು ಡೀನ್ ಡಾ.ಗಂಗಾಧರ ಗೌಡ ಅವರು ತಿಳಿಸಿದ್ದಾರೆ.
ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಉದ್ದೇಶಿಸಿರುವ ರೋಗಿಗಳು ಇನ್ನು ಮುಂದೆ ಟ್ರಾಮಾಕೇರ್ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ