ಗುರುವಾರ, ಜನವರಿ 11, 2024

ಯುವಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಜ.11(ಕರ್ನಾಟಕ ವಾರ್ತೆ): ತಾಲ್ಲೂಕಿನ ತೆಗ್ಗಿನ ಬೂದಿಹಾಳ್ ಗ್ರಾಮದ ಹೊನ್ನೂರ್ ವಲಿ ಎನ್ನುವ 24 ವರ್ಷದ ಯುವಕ ಜ.05 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಪಿ.ಡಿ.ಹಳ್ಳಿ ಪೋಲಿಸ್ ಠಾಣೆಯ ಪೋಲಿಸ್ ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ. ಯುವಕನ ಚಹರೆ ಗುರುತು: ವಯಸ್ಸು 24 ವರ್ಷ, ಎತ್ತರ 5 ಅಡಿ, ಉದ್ದನೆಯ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂಧರ್ಭದಲ್ಲಿ ಪಿಂಕ್ ಕಲರ್ ಟೀ ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆಯುಳ್ಳ ಯುವಕ ಕಾಣಿಸಿದ್ದಲ್ಲಿ ಪಿ.ಡಿ ಹಳ್ಳಿ ಪೋಲಿಸ್ ಠಾಣೆಯ ದೂ:08392-265010, ಪಿ.ಎಸ್.ಐ ಮೊ:9480803052, ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ ದೂ:08392-258100, ಬಳ್ಳಾರಿ ಎಸ್.ಪಿ ಕಚೇರಿ ದೂ:08392-258400, ಸಿರುಗುಪ್ಪ ಡಿಎಸ್‍ಪಿ ದೂ:08392-276000, ಪಿ.ಡಿ ಹಳ್ಳಿ ವೃತ್ತ ಸಿಪಿಐ ದೂ:08392-276461 ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ