ಬುಧವಾರ, ಜನವರಿ 3, 2024
ವಿಳಾಸ ಬದಲಾವಣೆ
ಬಳ್ಳಾರಿ,ಜ.03(ಕರ್ನಾಟಕ ವಾರ್ತೆ):
ರಾಯಚೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯನ್ನು ಪ್ರಾಂತದ ಕೇಂದ್ರಸ್ಥಾನವಾದ ಕಲಬುರಗಿ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ.
ಈ ಕಚೇರಿಗೆ ಸಂಬಂಧಿಸಿದ ಪತ್ರಗಳನ್ನು (ಟಪಾಲುಗಳನ್ನು) ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ, ಕಲಬುರಗಿ ಪ್ರಾಂತ, ಕಲಬುರಗಿ, ರತ್ನ ಆರ್ಕೇಡ್ ಕಟ್ಟಡ, ಕುಮಸಿ ಹೋಟೆಲ್ ಎದುರುಗಡೆ, ಎ.ಪಿ.ಎಂ.ಸಿ. ಮೇನ್ ಗೇಟ್ ಹತ್ತಿರ, ನೆಹರು ಗಂಜ್ ಪ್ರದೇಶ, ಕಲಬುರಗಿ-585100 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಬಳ್ಳಾರಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ