ಬುಧವಾರ, ಜನವರಿ 10, 2024
ಹೆಣ್ಣು ಶಿಶುವಿನ ಪೋಷಕರ ಪತ್ತೆಗಾಗಿ ಮನವಿ
ಬಳ್ಳಾರಿ,ಜ.10(ಕರ್ನಾಟಕ ವಾರ್ತೆ):
ಆಯುಷ ಎನ್ನುವ 01 ವರ್ಷ 02 ತಿಂಗಳಿನ ಮಗುವಿನ ತಾಯಿ ಮರಣ ಹೊಂದಿದ್ದು, ತಂದೆಯ ಮಾಹಿತಿ ಇರುವುದಿಲ್ಲ. ಪೋಷಕರ ಪತ್ತೆಗಾಗಿ ಸಹಕರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ಅವರು ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ 2023ರ ಏ.24 ರಂದು ನಿರಾಶ್ರಿತ ಪರಿಹಾರ ಕೇಂದ್ರದಿಂದ ಅಮೂಲ್ಯ (ಜಿ) ವಿಶೇಷ ದತ್ತು ಸಂಸ್ಥೆಗೆ ದಾಖಲಿಸಲಾಗಿದೆ.
ಮಗುವಿನ ವಿವರ: ತಂದೆಯ ಹೆಸರು ಸೈಯದ್ ಸಲೀಂ, ಚಹರೆ ಗುರುತು: ಎಣ್ಣೆ ಕೆಂಪು, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾಳೆ.
ಮಗು “ಆಯುಷ” ಳ ಜೈವಿಕ ಪೋಷಕರ ಮತ್ತು ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಂಟೋನ್‍ಮೆಂಟ್‍ನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯ ದೂ.08392-294473 ಅಥವಾ ಇ-ಮೇಲ್ ಜಛಿಠಿubಚಿಟಟಚಿಡಿi@gmಚಿiಟ.ಛಿom ಗೆ ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ