ಬುಧವಾರ, ಜನವರಿ 3, 2024

ಇಬ್ಬರಿಗೆ ಎರಡು ವರ್ಷ ಆರು ತಿಂಗಳ ಜೈಲು ಶಿಕ್ಷೆ

ಬಳ್ಳಾರಿ,ಜ.03(ಕರ್ನಾಟಕ ವಾರ್ತೆ): ಮೊಬೈಲ್ ಮತ್ತು ಫೆÇೀಟೊ ಸ್ಟುಡಿಯೊದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ದಂಡ ವಿಧಿಸಿ 5ನೇ ಎಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮುದುಕಪ್ಪ ಓದನ್ ಅವರು ಆದೇಶಿಸಿದ್ದಾರೆ. ಜಡೇಶ.ಜಿ ಮತ್ತು ಸಿದ್ದು.ಜಿ ಎನ್ನುವವರು ಶಿಕ್ಷೆಗೆ ಗುರಿಯಾದವರು. 2015ರ ಜು.13ರಂದು ಕುರುಗೋಡು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಮತ್ತು ಫೋಟೋ ಸ್ಟೂಡಿಯೋ ಶಾಫ್‍ನಲ್ಲಿ ಒಟ್ಟು 48.8 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಕುರುಗೋಡು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 12 ಜನ ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರಾದ ಮುದುಕಪ್ಪ ಓದನ್ ಅವರು ಆರೋಪಿಗಳಿಬ್ಬರಿಗೆ ಕಲಂ: 457 ಮತ್ತು 380 ಭಾ.ದಂ.ಸಂ. ಅಡಿಯಲ್ಲಿ ಆರೋಪ ಸಾಬೀತಾಗಿರುತ್ತದೆಂದು ಆರೋಪಿತರಿಗೆ ಶಿಕ್ಷೆ ವಿಧಿಸಿ ಕಲಂ: 457 ಭಾ.ದಂ.ಸಂ: ಅಡಿಯಲ್ಲಿ 2 ವರ್ಷ, 6 ತಿಂಗಳ ಸಜೆ ಮತ್ತು ತಲಾ 3000/- ದಂಡ ವಿಧಿಸಿದೆ ಮತ್ತು ಕಲಂ: 380 ಭಾ.ದಂ.ಸಂ. ಅಡಿಯಲ್ಲಿ 2 ವರ್ಷ, 6 ತಿಂಗಳ ಸಜೆ ಮತ್ತು ತಲಾ 3000/- ದಂಡ ವಿಧಿಸಿದ್ದು, ದಂಡ ಪಾವತಿಗೆ ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಹೆಚ್ಚುವರಿಯಾಗಿ ಅನುಭವಿಸಬೇಕೆಂದು ಶಿಕ್ಷೆ ವಿಧಿಸಿ ದಿ:22.12.2023 ರಂದು ಆದೇಶಿಸಿರುತ್ತಾರೆ. ಪ್ರಕರಣದಲ್ಲಿ, ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕೃಷ್ಣಮೂರ್ತಿ.ಜೆ.ಬಿ., ಅವರು ಸಾಕ್ಷಿ ವಿಚಾರಣೆ ಮಾಡಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾದ ಮುರ್ತುಜ ಸಾಬ ಅವರು, ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ