ಮಂಗಳವಾರ, ಮೇ 2, 2023

ಪಂಚಾಕ್ಷರಿ ಅವರಿಗೆ ಡಾಕ್ಟರೇಟ್ ಪದವಿ ಬಳ್ಳಾರಿ,ಮೇ 02(ಕರ್ನಾಟಕ ವಾರ್ತೆ): ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯುನ್ಮಾನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಿರೇಮಠ ಪಂಚಾಕ್ಷರಿ ರುದ್ರಯ್ಯಸ್ವಾಮಿ ಅವರಿಗೆ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ವಿಶ್ವ ವಿದ್ಯಾಲಯದ ವಿದ್ಯುನ್ಮಾನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಬಿ. ಎನ್.ಜಗದಾಳೆ ಅವರ ಮಾರ್ಗದರ್ಶನದಲ್ಲಿ ಅವರು ಮಂಡಿಸಿದ್ದ “ಡಿಜಿಟಲ್ ಸಿಗ್ನಲ್ ಎನಲೈಸಿಸ್ ಅಂಡ್ ಡಿನೌಜಿಂಗ್ ಯುಜಿಂಗ್ ವೇವಲೆಟ್ ಟ್ರಾನ್ಸ್‍ಫಾರ್ಮ್ ಟೆಕ್ನಿಕ್ಸ್” ಎನ್ನುವ ಮಹಾ ಪ್ರಬಂಧ ಮಂಡಿಸಿದ್ದರು. ಕಾಲೇಜಿನ ಪ್ರಾಂಶುಪಾಲರು, ಎಲ್ಲ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ