ಶುಕ್ರವಾರ, ಮೇ 5, 2023

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ): ನಗರದ ಕಂಟೋನ್‍ಮೆಂಟ್ ಮತ್ತು ಕುಡತಿನಿ ರೈಲ್ವೇ ನಿಲ್ದಾಣ ನಡುವಿನ ರೈಲ್ವೆ ನಿಲ್ದಾಣದಲ್ಲಿ ಮಧ್ಯದಲ್ಲಿ ರೈಲ್ವೆ ಕೆ.ಎಂ.ನಂ.2023/400-300 ರ ಅಪ್‍ಲೈನ್ ಹಳಿಯಲ್ಲಿ ಸುಮಾರು 20 ರಿಂದ 25 ವರ್ಷದ ಅನಾಮಧೇಯ ವ್ಯಕ್ತಿಯು ಮೇ 04ರಂದು ಮೃತಪಟ್ಟಿದ್ದು, ರೈಲ್ವೆ ಸಂಖ್ಯೆ-07657 ತಿರುಪತಿ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ರೈಲ್ವೆ ಗಾಡಿಗೆ ಸಿಕ್ಕು ಆಕಸ್ಮಿಕವಾಗಿ ಸಾವನ್ನಪ್ಪಿರುತ್ತಾನೆ. ವಾರಸುದಾರರು ಪತ್ತೆಯಾಗಿರುವುದಿಲ್ಲ. ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ರೈಲ್ವೇ ಪೊಲೀಸ್ ಠಾಣೆಯು ಪ್ರಕಟಣೆಯಲ್ಲಿ ತಿಳಿಸಿದೆ. ಚಹರೆ ಗುರುತು: ಎತ್ತರ ಸುಮಾರು 5.6 ಅಡಿ, ಸಾಧಾರಣ ಗೋಧಿ ಮೈಬಣ್ಣ, ಕೋಲು ಮುಖ, ಅಗಲವಾದ ಹಣೆ, ನೆಟ್ಟನೆಯ ಮೂಗು, ತಲೆಯಲ್ಲಿ ಸುಮಾರು ಎರಡು ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಗಡ್ಡ ಮತ್ತು ಚಿಗುರು ಮೀಸೆ ಹೊಂದಿರುತ್ತಾನೆ. ಮೃತನ ಮೈ ಮೇಲಿನ ಬಟ್ಟೆಗಳು: ಕಪ್ಪು ನೀಲಿ ಬಣ್ಣದ ಆಫ್ ಬನಿಯನ್(ಭುಜದ ಹತ್ತಿರ ತಿಳಿ ಗುಲಾಬಿ ಬಣ್ಣ ಇರುತ್ತದೆ). ನಸಿ ಬಣ್ಣದ ಅರ್ಧ ಪ್ಯಾಂಟ್ ಧರಿಸಿರುತ್ತಾನೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ