ಶುಕ್ರವಾರ, ಮೇ 5, 2023

ವಿಧಾನಸಭಾ ಸಾರ್ವತ್ರಿಕ ಚುನಾವಣೆ ----- ಅಗತ್ಯ ಸೇವೆಗಳ ಕ್ಷೇತ್ರಗಳಡಿಯ ನೌಕರರ ಮತದಾನ: ಕೊನೆಯ ದಿನದಂದು 68 ಮತದಾರರಿಂದ ತಮ್ಮ ಮತ ಚಲಾವಣೆ ----- ಬಳ್ಳಾರಿ,ಮೇ 04(ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ತ ಮತದಾನ ದಿನದಂದು ಗೈರು ಹಾಜರಾಗಬಹುದಾದ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ತಮ್ಮ ಮತವನ್ನು ಚಲಾಯಿಸಲು ಚುನಾವಣಾ ಆಯೋಗವು ಮೇ. 02 ರಿಂದ 04 ರವರೆಗೆ ಕಲ್ಪಿಸಿದ್ದ ವಿಶೇಷ ವ್ಯವಸ್ಥೆಯಲ್ಲಿ, ಕೊನೆಯ ದಿನವಾದ ಗುರುವಾರದಂದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 68 ಮತದಾರರು ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. *ಕ್ಷೇತ್ರವಾರು ವಿವರ:* 91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 5 ಮತದಾರರು, 92-ಸಿರುಗುಪ್ಪ ಕ್ಷೇತ್ರದಲ್ಲಿ 14 ಮತದಾರರು, 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 22 ಮತದಾರರು, 94-ಬಳ್ಳಾರಿ ನಗರ ಕ್ಷೇತ್ರದಲ್ಲಿ 17 ಮತದಾರರು ಹಾಗೂ 95-ಸಂಡೂರು ಕ್ಷೇತ್ರದಲ್ಲಿ 10 ಮತದಾರರು ತಮ್ಮ ಮತ ಚಲಾಯಿಸಿದ್ದು, ಮೂರನೇಯ ದಿನದಂದು ಒಟ್ಟು 68 ಮತದಾರರು ಮತದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಅಗತ್ಯ ಸೇವೆಗಳ ವ್ಯಾಪ್ತಿಯ 207 ಮತದಾರರು 12 ಡಿ ನಮೂನೆಯಡಿ ಮತ ಚಲಾಯಿಸಲು ನೊಂದಾಯಿಸಿಕೊಂಡಿದ್ದು, ಮತದಾನ ಮಾಡಲು ಕಾಲಾವಕಾಶ ನೀಡಲಾಗಿದ್ದ ಮೂರು ದಿನಗಳ ಅವಧಿಯಲ್ಲಿ ಒಟ್ಟು 184 ಮತದಾರರಿಂದ ಮತದಾನ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ