ಮಂಗಳವಾರ, ಅಕ್ಟೋಬರ್ 3, 2023

ಸಂಡೂರಿನಿಂದ ಹೈದ್ರಬಾದ್‍ಗೆ ನೂತನ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಅ.04ರಿಂದ

ಬಳ್ಳಾರಿ,ಅ.03(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ಸಂಡೂರು ಘಟಕದಿಂದ ಸಂಡೂರಿನಿಂದ ಹೈದ್ರಬಾದ್‍ಗೆ (ವಯಾ ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗದಲ್ಲಿ) ಅಕ್ಟೋಬರ್ 04ರಿಂದ ಪ್ರತಿಷ್ಠಿತ ಎ/ಸಿ ಸ್ಲೀಪರ್ ನೂತನ ಬಸ್ ಕಾರ್ಯಾಚರಣೆ ಆರಂಭಿಸಲಾಗುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ. *ಸಂಚರಿಸುವ ವೇಳೆ:* ಸಂಡೂರಿನಿಂದ ರಾತ್ರಿ 07 ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10 ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗವಾಗಿ) ಹೈದ್ರಬಾದ್‍ಗೆ ಬೆಳಿಗ್ಗೆ 06.10ಕ್ಕೆ ತಲುಪಲಿದೆ. ಪ್ರಯಾಣ ದರವು ಸಂಡೂರಿನಿಂದ ರೂ.1,290 ಹಾಗೂ ಬಳ್ಳಾರಿಯಿಂದ ರೂ.1,120 ಇರಲಿದೆ. ಹೈದ್ರಬಾದ್‍ನಿಂದ ರಾತ್ರಿ 09.46 ಕ್ಕೆ ಹೊರಟು, ಬಳ್ಳಾರಿಗೆ 06.15 ಕ್ಕೆ (ಪ್ರಯಾಣ ದರ ರೂ.1,120) ಹಾಗೂ ಸಂಡೂರಿಗೆ ಬೆಳಿಗ್ಗೆ 08 ಕ್ಕೆ (ಪ್ರಯಾಣ ದರ ರೂ.1,290) ಆಗಮಿಸಲಿದೆ. ಮುಂಗಡ ಆಸನಗಳನ್ನು ಆನ್‍ಲೈನ್‍ನ www.ksrtc.in ಗೆ ಲಾಗ್-ಇನ್ ಆಗುವ ಮೂಲಕ ಕಾಯ್ದಿರಿಸಬಹುದು. ಪ್ರತಿಷ್ಠಿತ ಎ/ಸಿ ಸ್ಲೀಪರ್ ನೂತನ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ