ಬುಧವಾರ, ಏಪ್ರಿಲ್ 5, 2023

ನೀತಿ ಸಂಹಿತೆ ಉಲ್ಲಂಘನೆ; 10 ಪ್ರಕರಣ ದಾಖಲು 16.60 ಲಕ್ಷ ರೂ. ನಗದು ವಶ: ಡಿಸಿ ಮಾಲಪಾಟಿ ಮಾಹಿತಿ ಬಳ್ಳಾರಿ,ಏ.5(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಚೆಕ್‍ಪೆÇೀಸ್ಟ್‍ಗಳು ಹದ್ದಿನ ಕಣ್ಗಾವಲಾಗಿ ಕಾರ್ಯನಿರ್ವಹಿಸುತ್ತಿವೆ. ಮಂಗಳವಾರದ ವರದಿಯ ಪ್ರಕಾರ, ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 16,60,912 ನಗದು ಹಣ ಸೇರಿ 0.11 ಗ್ರಾಂ ಗಾಂಜಾ (ರೂ.4 ಸಾವಿರ ಬೆಲೆಬಾಳುವ) ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 43 ಫ್ಲೈಯಿಂಗ್ ಸ್ವ್ಯಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡ ಕೆಲಸ ನಿರ್ವಹಿಸುತ್ತಿವೆ. ಮಂಗಳವಾರ 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು ಪರಿಶೀಲನೆ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15,78,100 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ. ಮತ್ತು ಸ್ಟಾಟಿಕ್ ಸರ್ವೈವ್‍ಲೆನ್ಸ್ ಟೀಮ್(ಎಸ್‍ಎಸ್‍ಟಿ) ಪರಿಶೀಲನೆ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 82,812 ಸಾವಿರ ರೂ.ಗಳನ್ನು ವಶಪಡಿಸಿಕೊಂಡು ಕಮಿಟಿ ಮುಂದೆ ಹಾಜರು ಪಡೆಸಲು ಸೂಚಿಸಲಾಗಿದೆ. 95-ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಧೀಕೃತವಾಗಿ ಸಾಗಿಸುತ್ತಿದ್ದ 0.11 ಗ್ರಾಂ ಗಾಂಜಾ (ರೂ.4 ಸಾವಿರ ಬೆಲೆಬಾಳುವ) ತೋರಣಗಲ್ಲು ಪೊಲೀಸ್‍ಠಾಣೆಯಲ್ಲಿ ಎನ್‍ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯಿಂದ 8 ಪ್ರಕರಣ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಟೀಮ್(ಎಫ್‍ಎಸ್‍ಟಿ), ಸ್ಟಾಟಿಕ್ ಸರ್ವೈವ್‍ಲೆನ್ಸ್ ಟೀಮ್(ಎಸ್‍ಎಸ್‍ಟಿ) ಹಾಗೂ ಪೆÇಲೀಸ್ ಇಲಾಖೆ 2 ಸೇರಿದಂತೆ ಒಟ್ಟು 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ