ಬುಧವಾರ, ಏಪ್ರಿಲ್ 26, 2023

ಕಂಪ್ಲಿ ವಿಧಾನಸಭಾ ಕ್ಷೇತ್ರ : ವೆಚ್ಚ ಲೆಕ್ಕಪತ್ರಗಳ ಪರಿಶೀಲನೆಗೆ ದಿನ ಮತ್ತು ಸ್ಥಳ ಬದಲಾವಣೆ ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಗಳ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ನಿಗದಿಯಾಗಿದ್ದ ದಿನ ಮತ್ತು ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಡಾ.ನಯನ ಅವರು ತಿಳಿಸಿದ್ದಾರೆ. ಮರು ನಿಗದಿಪಡಿಸಿದ ದಿನ ಮತ್ತು ಸ್ಥಳ ವಿವರ: ಲೆಕ್ಕ ಪತ್ರಗಳ ಪರಿಶೀಲನೆಯಲ್ಲಿ ಮೊದಲನೇ ಪರಿಶೀಲನೆಯು ಏ.30 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ, ಎರಡನೇ ಪರಿಶೀಲನೆಯು ಮೇ 4 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಮೂರನೇ ಪರಿಶೀಲನೆಯು ಮೇ 8 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಕಂಪ್ಲಿ ಪುರಸಭೆ ಕಚೇರಿಯ ಚುನಾವಣಾ ಕಾರ್ಯಾಲಯದಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಬದಲಾವಣೆಗೊಂಡ ದಿನ ಹಾಗೂ ಸ್ಥಳದ ಅನ್ವಯ ಲೆಕ್ಕಪತ್ರಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ. ---

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ