ಸೋಮವಾರ, ಏಪ್ರಿಲ್ 24, 2023
ವಿಧಾನಸಭಾ ಸಾರ್ವತ್ರಿಕ ಚುನಾವಣೆ:
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 7 ಅಭ್ಯರ್ಥಿಗಳು ನಾಮಪತ್ರ ವಾಪಸ್
ಬಳ್ಳಾರಿ,ಏ.24(ಕರ್ನಾಟಕ ವಾರ್ತೆ):
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಸಂಬಂಧಿಸಿದಂತೆ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಸೋಮವಾರದಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 7 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
*ಕ್ಷೇತ್ರವಾರು ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ:*
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿರುವುದಿಲ್ಲ.
ಅಂತಿಮ ಕಣದಲ್ಲಿ ಒಟ್ಟು 7 ಅಭ್ಯರ್ಥಿಗಳು ಉಳಿದಿದ್ದು, ವಿವರ ಇಂತಿದೆ:
ರಾಜು ನಾಯಕ್-ಜನತಾ ದಳ (ಜಾತ್ಯಾತೀತ), ಟಿ.ಹೆಚ್.ಸುರೇಶ್‍ಬಾಬು-ಭಾರತೀಯ ಜನತಾ ಪಕ್ಷ, ಜೆ.ಎನ್.ಗಣೇಶ್-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಉತ್ತನೂರು ನಾಗರಾಜ-ಬಹುಜನ ಸಮಾಜ ಪಕ್ಷ, ಹೆಚ್.ಪ್ರಹ್ಲಾದ್ ನಾಯಕ್-ಆಮ್ ಆದ್ಮಿ ಪಕ್ಷ, ಎ.ದೇವದಾಸ್-ಸೊಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷ, ರಾಮಕ್ಕ.ಟಿ- ದೇಶ ಪ್ರೇಮ ಪಕ್ಷ.
92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹೆಚ್.ಸಿ.ರಾಧಾ ಮತ್ತು ಪಕ್ಷೇತರ ಅಭ್ಯರ್ಥಿ ಈರಬಸಮ್ಮ ಹುಣಸೇಮರದವರು ನಾಮಪತ್ರ ವಾಪಸ್ ಪಡೆದುಕೊಂಡಿರುತ್ತಾರೆ.
ಅಂತಿಮ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳು ಉಳಿದಿದ್ದು, ವಿವರ ಇಂತಿದೆ:
ಬಿ.ಎಂ.ನಾಗರಾಜ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬಿ.ಪರಮೇಶ್ವರ-ಜನತಾದಳ (ಜಾತ್ಯಾತೀತ) ಪಕ್ಷ, ಬಿ.ಲೋಕೇಶ್-ಆಮ್ ಆದ್ಮಿ ಪಕ್ಷ, ಎಮ್.ಎಸ್.ಸೋಮಲಿಂಗಪ್ಪ-ಭಾರತೀಯ ಜನತಾ ಪಕ್ಷ, ಟಿ.ದರಪ್ಪ ನಾಯಕ-ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ದೊಡ್ಡಯಲ್ಲಪ್ಪ-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಎಮ್.ಎಚ್.ವೀರೇಶಪ್ಪ ಹುಣಸೇಮರದವರು-ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷ, ಎಂ.ಎಸ್‍ಗಾದಿಲಿಂಗಪ್ಪ-ಪಕ್ಷೇತರ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತ.ಎಸ್.
93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ವೆಂಕಟೇಶ್ ಪ್ರಸಾದ್ ಅವರು ನಾಮಪತ್ರ ವಾಪಸ್ ಪಡೆದಿರುತ್ತಾರೆ.
ಅಂತಿಮ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳು ಉಳಿದಿದ್ದು, ವಿವರ ಇಂತಿದೆ:
ಜಾಲಿಯಳ ರುದ್ರಪ್ಪ- ಆಮ್ ಆದ್ಮಿ ಪಕ್ಷ, ಬಿ.ನಾಗೇಂದ್ರ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ನಾಯಕರ ಕ್ರಿಷ್ಣಪ್ಪ-ಬಹುಜನ ಸಮಾಜ ಪಕ್ಷ, ಬಿ.ಶ್ರೀರಾಮುಲು-ಭಾರತೀಯ ಜನತಾ ಪಕ್ಷ, ವಾಲ್ಮೀಕಿ ಯುಗಂಧರ- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಟಿ.ಹೆಚ್.ಮಲ್ಲಿಕಾರ್ಜುನ-ಪಕ್ಷೇತರ, ಕೆ.ಶಂಭುಲಿಂಗ-ಪಕ್ಷೇತರ, ಬಿ.ಷಣ್ಮುಖ ನವೀನ್ ಬಾಬು-ಪಕ್ಷೇತರ.
94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬ್ರಹ್ಮಣಿ ರೆಡ್ಡಿ, ಪಕ್ಷೇತರ ಅಭ್ಯರ್ಥಿ ನಾರಾಯಣಸ್ವಾಮಿ, ಪಕ್ಷೇತರ ಅಭ್ಯರ್ಥಿ ಜಿ.ವಿಜಯಮ್ಮ, ಪಕ್ಷೇತರ ಅಭ್ಯರ್ಥಿ ಗಂಗಿರೆಡ್ಡಿ ಅವರು ನಾಮಪತ್ರ ವಾಪಸ್ ಪಡೆದಿರುತ್ತಾರೆ.
ಅಂತಿಮ ಕಣದಲ್ಲಿ ಒಟ್ಟು 24 ಅಭ್ಯರ್ಥಿಗಳು ಉಳಿದಿದ್ದು, ವಿವರ ಇಂತಿದೆ:
ಜಿ.ಸೋಮಶೇಖರ ರೆಡ್ಡಿ-ಭಾರತೀಯ ಜನತಾ ಪಕ್ಷ, ನಾರಾ ಭರತ್ ರೆಡ್ಡಿ-
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬಾಬು.ಕೆ-ಬಹುಜನ ಸಮಾಜ ಪಕ್ಷ, ದೊಡ್ಡಕೇಶವ ರೆಡ್ಡಿ-ಆಮ್ ಆದ್ಮಿ ಪಕ್ಷ, ಅನೀಲ್ ಹೆಚ್ ಲಾಡ್- ಜನತಾ ದಳ (ಜಾತ್ಯಾತೀತ), ಕೆ.ಶ್ರೀನಿವಾಸ ರೆಡ್ಡಿ-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಆರ್.ಸೋಮಶೇಖರ ಗೌಡ-ಸೊಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಪಕ್ಷ, ಆಲೇಶ್ವರ ಗೌಡ.ಹೆಚ್- ಜನಹಿತ ಪಕ್ಷ, ಲಕ್ಷ್ಮೀ ಅರುಣ.ಜಿ- ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಡಾ.ಕೆ.ಆರ್.ರವಿಕುಮಾರ್- ದೇಶ ಪ್ರೇಮ ಪಕ್ಷ, ಆರ್.ವೇಣುಗೋಪಾಲ್-ಸಮಾಜವಾದಿ ಪಕ್ಷ, ಸಿ.ಶರಣಬಸಪ್ಪ- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ, ಅಶೋಕ ಕುಮಾರ್ ರೆಡ್ಡಿ.ಪಿ.ವಿ- ಪಕ್ಷೇತರ, ಪಿ.ಚಾಂದ್‍ಬಾಷಾ-ಪಕ್ಷೇತರ, ಮೊಹಮ್ಮದ್ ರಿಯಾಜ್ ಅಹಮ್ಮದ್-ಪಕ್ಷೇತರ, ಜಾಕೀರ್-ಪಕ್ಷೇತರ, ಅರುಣ್ ಕುಮಾರ್-ಪಕ್ಷೇತರ, ಕಂದೂರಿ ಅಜೇಯ ಕುಮಾರ್-ಪಕ್ಷೇತರ, ಉಪ್ಪಾರ ಅನೀಲ್‍ಕುಮಾರ್-ಪಕ್ಷೇತರ, ಬಿ.ಆರ್.ಮಂಜುನಾಥ-ಪಕ್ಷೇತರ, ಶ್ರೀಧರ್.ಕೆ-ಪಕ್ಷೇತರ, ಕೆ.ಭರತ್‍ಬಾಬು-ಪಕ್ಷೇತರ, ಎಸ್.ಬಿ.ಶಿವಕುಮಾರ್-ಪಕ್ಷೇತರ, ಅಹಮ್ಮದ್ ಮೊಹಮ್ಮದ್-ಪಕ್ಷೇತರ.
95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿರುವುದಿಲ್ಲ.
ಅಂತಿಮ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳು ಉಳಿದಿದ್ದು, ವಿವರ ಇಂತಿದೆ:
ಕೆ.ಆರ್.ಕುಮಾರ್ ಸ್ವಾಮಿ- ಆಮ್ ಆದ್ಮಿ ಪಕ್ಷ, ಈ.ತುಕಾರಾಮ್-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಶಕುಂತಲ.ಕೆ-ಬಹುಜನ ಸಮಾಜ ಪಕ್ಷ, ಶಿಲ್ಪಾ ಪಾಟೀಲ್-ಭಾರತೀಯ ಜನತಾ ಪಕ್ಷ, ಸೋಮಪ್ಪ.ಎನ್-ಜನತಾದಳ (ಜಾತ್ಯಾತೀತ) ಪಕ್ಷ, ಕೆ.ಎಸ್.ದಿವಾಕರ- ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ವೇಬಾ ಕುಮಾರಿ- ಕೆಆರ್‍ಎಸ್ ಪಕ್ಷ, ಗೆರೆಗಲ್ ಪಾಪಯ್ಯ-ಪಕ್ಷೇತರ.
ಒಟ್ಟಾರೆಯಾಗಿ 7 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದು, ಅಂತಿಮವಾಗಿ 56 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ