ಮಂಗಳವಾರ, ಏಪ್ರಿಲ್ 25, 2023

ಬಳ್ಳಾರಿ ಗಾಮೀಣ ವಿಧಾನಸಭಾ ಚುನಾವಣೆ: ಚುನಾವಣಾ ಅಭ್ಯರ್ಥಿಗಳ ವೆಚ್ಚದ ಲೆಕ್ಕಪತ್ರಗಳ ಪರಿಶೀಲನೆಗೆ ದಿನ ನಿಗದಿ ಬಳ್ಳಾರಿ,ಏ.25(ಕರ್ನಾಟಕ ವಾರ್ತೆ): ಬಳ್ಳಾರಿ ಗಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಗಳ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಮೂರು ಬಾರಿ ಹಾಜರುಪಡಿಸಲು ದಿನ ನಿಗದಿಪಡಿಸಲಾಗಿದೆ. ಚುನಾವಣೆ ಆಯೋಗ ನೀಡಿರುವ ಹಾಗೂ ತಾವು ನಿರ್ವಹಿಸುತ್ತಿರುವ (ಭಾಗ-ಎ, ಭಾಗ-ಬಿ ಮತ್ತು ಭಾಗ-ಸಿ ಪುಸ್ತಕಗಳು) ಚುನಾವಣೆಗಾಗಿ ತೆರೆದಿರುವ ಪ್ರತ್ಯೇಕ ಬ್ಯಾಂಕ್ ಪುಸ್ತಕ, ಬಿಲ್ಸ್, ವೋಚರ್ಸ್ ಹಾಗೂ ಇತರೆ ಚುನಾವಣೆ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. *ನಿಗದಿಪಡಿಸಿದ ದಿನ ವಿವರ:* ಮೊದಲನೇ ಪರಿಶೀಲನೆಯು ಏ.26 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ, ಎರಡನೇ ಪರಿಶೀಲನೆಯು ಮೇ 2 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಹಾಗೂ ಮೂರನೇ ಪರಿಶೀಲನೆಯು ಮೇ 7 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಾಯಕ ಆಯುಕ್ತರ ಕಚೇರಿ ಹಾಗೂ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗುವುದು. ಲೆಕ್ಕಪತ್ರಗಳ ಪರಿಶೀಲನೆಯು ಕಡ್ಡಾಯವಾಗಿದ್ದು, ಚುನಾವಣೆಗೆ ಸ್ವರ್ಧಿಸುವ ಅಭ್ಯರ್ಥಿ ಅಥವಾ ಆತನ ಏಜೆಂಟ್‍ದಾರರು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಬ್ಯಾಂಕ್ ಪುಸ್ತಕವನ್ನು ಅಪ್‍ಡೇಟ್ ಮಾಡಿಕೊಂಡು ನಿಗದಿಪಡಿಸಿದ ದಿನದಂದು ನಿಗಡಿಪಡಿಸಿದ ಸಮಯಕ್ಕೆ ಲೆಕ್ಕ ಪತ್ರಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು ಎಂದು 93-ಬಳ್ಳಾರಿ ಗಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ