ಮಂಗಳವಾರ, ಏಪ್ರಿಲ್ 18, 2023

ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ ಬಳ್ಳಾರಿ,ಏ.18(ಕರ್ನಾಟಕ ವಾರ್ತೆ): ತಾಲೂಕಿನ ಕುಡತಿನಿ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ವಹಣೆಗಾಗಿ ಕಟ್ಟಡ ಬಾಡಿಗೆಗೆ ಬೇಕಾಗಿದ್ದು, ಬಾಡಿಗೆ ಕಟ್ಟಡವನ್ನು ನೀಡಲು ಇಚ್ಚಿಸುವ ಕಟ್ಟಡಗಳ ಮಾಲೀಕರು ನಗರದ ಕಂಟೋನ್‍ಮೆಂಟ್‍ನ ಸುಧಾಕ್ರಾಸ್‍ನ ಎಲ್‍ಎಲ್‍ಸಿ ಕಾಲೋನಿ ಹತ್ತಿರದ ಡಿಸ್ನಿ ಫಂಕ್ಷನ್ ಹಾಲ್ ಎದುರುಗಡೆಯ 1ನೇ ಮಹಡಿಯ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಅಥವಾ ದೂ.08392-294492 ಗೆ ಸಂಪರ್ಕಿಸಬಹುದು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ