ಸೋಮವಾರ, ಏಪ್ರಿಲ್ 17, 2023
ಜಿಲ್ಲೆಯಲ್ಲಿ ಒಟ್ಟು 11,51,283 ಮತದಾರರು, ಮಹಿಳೆಯರೇ ಮೇಲುಗೈ*
*ಈ ಬಾರಿ 38,866 ಯುವ ಮತದಾರರು ನೊಂದಣಿ: ಡಿಸಿ ಮಾಲಪಾಟಿ ಮಾಹಿತಿ*
ಬಳ್ಳಾರಿ,ಏ.17(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ 2023 ಏಪ್ರಿಲ್ 16 ರ ಮತದಾರರ ಪಟ್ಟಿಯನ್ವಯ ಒಟ್ಟು 11,51,283 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದು, 5,84,307 ಮಹಿಳಾ ಮತದಾರರು, 5,66,805 ಪುರುಷ ಮತದಾರರು ಹಾಗೂ 171 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ ಮತ್ತು ಈ ಬಾರಿ 38,866 ಯುವ ಮತದಾರರ ನೊಂದಣಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 16,845 ಜನ 80 ವರ್ಷ ಮೇಲ್ಪಟ್ಟ ಮತದಾರರು, 15,047 ವಿಶೇಷ ಚೇತನ ಮತದಾರರು ಮತ್ತು 1,406 ಜನ ವಿಐಪಿ ಮಾರ್ಕ್‍ಡ್ ಮತದಾರರಿದ್ದಾರೆ.
*ಕ್ಷೇತ್ರವಾರು ಮತದಾರರ ವಿವರ:*
*ಕಂಪ್ಲಿ ವಿಧಾನಸಭಾ ಕ್ಷೇತ್ರ:* 91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1,06,386 ಪುರುಷ ಮತದಾರರು, 1,07,714 ಮಹಿಳೆ ಮತದಾರರು ಹಾಗೂ 29 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,14,129 ಮತದಾರರಿದ್ದಾರೆ. ಅದರಲ್ಲಿ 7,958 ಯುವ ಮತದಾರರು, 2,509 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 4,309 ವಿಶೇಷ ಚೇತನ ಮತದಾರರು ಹಾಗೂ 577 ಜನ ವಿಐಪಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿವೆ.
*ಸಿರುಗುಪ್ಪ ವಿಧಾನಸಭಾ ಕ್ಷೇತ್ರ:* 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 1,06,711 ಪುರುಷ ಮತದಾರರು, 1,10,292 ಮಹಿಳೆ ಮತದಾರರು ಹಾಗೂ 38 ಜನ ಇತರೆ ಮತದಾರರಿದ್ದು, ಒಟ್ಟು 2,17,041 ಮತದಾರರಿದ್ದಾರೆ. ಅದರಲ್ಲಿ 6,943 ಯುವ ಮತದಾರರು, 3,128 ಜನ 80 ವರ್ಷ ಮೇಲ್ಪಟ್ಟ ಮತದಾರರು, 3,686 ವಿಶೇಷಚೇತನ ಮತದಾರರು ಹಾಗೂ 189 ವಿಐಪಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 227 ಮತಗಟ್ಟೆಗಳಿವೆ.
*ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:* 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕೇತ್ರದಲ್ಲಿ 1,16,060 ಪುರುಷ ಮತದಾರರು, 1,22,098 ಮಹಿಳೆ ಮತದಾರರು ಹಾಗೂ 49 ಜನ ಇತರೆ ಮತದಾರರಿದ್ದು, ಒಟ್ಟು 2,38,207 ಮತದಾರರಿದ್ದಾರೆ. ಅದರಲ್ಲಿ 7,833 ಯುವ ಮತದಾರರು, 3,437 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 2,989 ವಿಶೇಷ ಮತದಾರರು ಹಾಗೂ 385 ವಿಐಪಿ ಮತದಾರಿದ್ದಾರೆ. ಇಲ್ಲಿ ಒಟ್ಟು 242 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
*ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:* 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 1,25,880 ಪುರುಷ ಮತದಾರರು, 1,32,900 ಮಹಿಳೆ ಮತದಾರರು ಮತ್ತು 29 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರು ಸೇರಿ ಒಟ್ಟು 2,58,809 ಮತದಾರರಿದ್ದಾರೆ.
ಅದರಲ್ಲಿ 8,332 ಯುವ ಮತದಾರರು, 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,370 ವಿಶೇಷ ಚೇತನ ಮತದಾರರು ಹಾಗೂ 101 ಜನ ವಿಐಪಿ ಮತದಾರರಿದ್ದಾರೆ. ನಗರದಲ್ಲಿ ಒಟ್ಟು 262 ಮತಗಟ್ಟೆಗಳಿವೆ.
*ಸಂಡೂರು ವಿಧಾನಸಭಾ ಕ್ಷೇತ್ರ:* 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 1,11,768 ಪುರುಷ ಮತದಾರರು, 1,11,303 ಮಹಿಳೆ ಮತದಾರರು ಮತ್ತು ಇತರೆ 26 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಒಳಗೊಂಡು ಒಟ್ಟು 2,23,097 ಮತದಾರರಿದ್ದಾರೆ. ಈ ಪೈಕಿ 7,800 ಯುವ ಮತದಾರರು, 3,080 ಜನ ವಯಸ್ಕ ಮತದಾರರು, 2,693 ವಿಶೇಷಚೇತನ ಮತದಾರರು ಹಾಗೂ 154 ಜನ ವಿಐಪಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 251 ಮತಗಟ್ಟೆಗಳಿವೆ. ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ