ಸೋಮವಾರ, ಏಪ್ರಿಲ್ 24, 2023
ಬಳ್ಳಾರಿ ನಗರ ವಿಧಾನಸಭಾ ಚುನಾವಣೆ:
ಲೆಕ್ಕಪತ್ರಗಳನ್ನು ವೆಚ್ಚವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಲು ಅಭ್ಯರ್ಥಿಗಳಿಗೆ ಸೂಚನೆ
ಬಳ್ಳಾರಿ,ಏ.24(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರ ಚುನಾವಣೆಗೆ ಸ್ವರ್ಧಿಸುತ್ತಿರುವ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಅವಧಿಯೊಳಗೆ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಬೇಕು ಎಂದು 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್ ಅವರು ಸೂಚನೆ ನೀಡಿದ್ದಾರೆ.
ಚುನಾವಣೆ ಪ್ರಚಾರ ಅವಧಿಯೊಳಗೆ ಚುನಾವಣಾ ವೆಚ್ಚದ ಲೆಕ್ಕ ಪತ್ರಗಳನ್ನು ಕಡ್ಡಾಯವಾಗಿ ಕನಿಷ್ಠ 3 ಬಾರಿ ಚುನಾವಣಾ ವೆಚ್ಚ ವೀಕ್ಷಕರಿಂದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಚುನಾವಣೆ ಆಯೋಗ ನೀಡಿರುವ ಹಾಗೂ ತಾವು ನಿರ್ವಹಿಸುತ್ತಿರುವ (ಭಾಗ-ಎ, ಭಾಗ-ಬಿ ಮತ್ತು ಭಾಗ-ಸಿ ಪುಸ್ತಕಗಳು) ಚುನಾವಣೆಗಾಗಿ ತೆರೆದಿರುವ ಪ್ರತ್ಯೇಕ ಬ್ಯಾಂಕ್ ಪುಸ್ತಕ, ಬಿಲ್ಸ್, ವೋಚರ್ಸ್ ಹಾಗೂ ಇತರೆ ಚುನಾವಣೆ ಲೆಕ್ಕಪತ್ರಗಳ ಪರಿಶೀಲನೆಗಾಗಿ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಮೊದಲನೇ ಪರಿಶೀಲನೆಯು ಏ.27 ರಂದು ಬೆಳಗ್ಗೆ 10ರಿಂದ ಸಂಜೆ 5.30 ರವರೆಗೆ, ಎರಡನೇ ಪರಿಶೀಲನೆಯು ಮೇ 2 ರಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಹಾಗೂ ಮೂರನೇ ಮತ್ತು ಅಂತಿಮ ಪರಿಶೀಲನೆಯು ಮೇ 8 ರಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಮಹಾನಗರ ಪಾಲಿಕೆ ಮುಖ್ಯ ಕಚೇರಿಯ ಶ್ರೀ ಕೃಷ್ಣ ದೇವರಾಯ ಸಭಾಂಗಣದಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗುವುದು.
ಲೆಕ್ಕಪತ್ರಗಳ ಪರಿಶೀಲನೆಯು ಕಡ್ಡಾಯವಾಗಿದ್ದು, ಚುನಾವಣೆಗೆ ಸ್ವರ್ಧಿಸುವ ಅಭ್ಯರ್ಥಿ ಅಥವಾ ಆತನ ಏಜೆಂಟ್‍ದಾರರು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಬ್ಯಾಂಕ್ ಪುಸ್ತಕವನ್ನು ಅಪ್‍ಡೇಟ್ ಮಾಡಿಕೊಂಡು ನಿಗದಿಪಡಿಸಿದ ದಿನದಂದು ನಿಗಡಿಪಡಿಸಿದ ಸಮಯಕ್ಕೆ ಲೆಕ್ಕ ಪತ್ರಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ಚುನಾವಣಾಧಿಕಾರಿ ರುದ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ