ಬುಧವಾರ, ಏಪ್ರಿಲ್ 26, 2023

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಏ.28ರಂದು ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 400 ಕೆ.ವಿ ಬಿಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ 200 ಕೆ.ವಿ ಅಲ್ಲೀಪುರ-ಬಿಟಿಪಿಎಸ್ ಮಾರ್ಗದಲ್ಲಿ ಬಸ್ ನಿರ್ವಹಣೆ ಕಾಮಗಾರಿ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದು, ಏ.28 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: 110/11 ಕೆ.ವಿ ಉಪಕೇಂದ್ರಗಳಾದ ದಕ್ಷಿಣ, ಉತ್ತರ, ಹಲಕುಂದಿ, ಮೀನಹಳ್ಳಿ ಬಿಸಲಹಳ್ಳಿ, ಮೋಕಾ, ಶ್ರೀಧರಗಡ್ಡ ಮತ್ತು ಕುರುಗೊಡು ಪ್ರದೇಶಗಳು ಹಾಗೂ 33/11 ಕೆ.ವಿ ಗುಡದೂರು, ಎಮ್ಮಿಗನೂರು, ರೂಪನಗುಡಿ, ಎರ್ರಗುಡಿ ಪ್ರದೇಶಗಳು. 220/11 ಕೆ.ವಿ ಅಲ್ಲಿಪುರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. ________

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ