ಸೋಮವಾರ, ಏಪ್ರಿಲ್ 24, 2023
ವ್ಯಕ್ತಿ ಕಾಣೆ
ಬಳ್ಳಾರಿ,ಏ.24(ಕರ್ನಾಟಕ ವಾರ್ತೆ):
ಸಿರುಗುಪ್ಪ ಪಟ್ಟಣದ 8ನೇ ವಾರ್ಡ್ ನಿವಾಸಿಯಾದ ಪಿ.ಸುರೇಶ್ ಬಾಬು ಎನ್ನುವ 50 ವರ್ಷದ ವ್ಯಕ್ತಿಯು ಏ.14 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪಿಎಸ್‍ಐ ಅವರು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿ ಚಹರೆ ಗುರುತು: ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ ಹೊಂದಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಭಾμÉಯನ್ನು ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಕ್ರೀಮ್ ಕಲರಿನ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಸಿರುಗುಪ್ಪ ಪೆÇಲೀಸ್ ಠಾಣೆಯ ದೂ.08396-220333, ಸಿ.ಪಿ.ಐ ವೃತ್ತ ಸಿರುಗುಪ್ಪ ದೂ.08396-220003, ಡಿ.ಎಸ್.ಪಿ ಸಿರುಗುಪ್ಪ ದೂ.08392-276000, ಎಸ್.ಪಿ ಬಳ್ಳಾರಿ ಅವರ ದೂ.08932-258400 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ