ಗುರುವಾರ, ಏಪ್ರಿಲ್ 27, 2023

ಏ.28ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ ಬಳ್ಳಾರಿ,ಏ.27(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ವ್ಯಾಪ್ತಿಯ 220/11 ಕೆ.ವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಬ್ಯಾಂಕ್-2 ಫೀಡರ್‍ಗಳಾದ ಎಫ್-34, ಎಫ್-36, ಎಫ್-40, ಎಫ್-75, ಎಫ್-76, ಎಫ್-77 ಮತ್ತು ಎಫ್-39 ಫೀಡರ್‍ಗಳ ಸಿ.ಟಿಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಏ.28 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ವಿನಾಯಕ ನಗರ, ಕ್ಯಾಂಟೋನ್‍ಮೆಂಟ್, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್‍ಬಜಾರ್ ಮೇನ್ ರೋಡ್, ಟೈಲರ್ ಬೀದಿ, ಕುವೆಂಪು ನಗರ, ಜಯನಗರ, ಚಂದ್ರ ಕಾಲೋನಿ, ರಾಮಂಜನೇಯ ನಗರ, ಸಿ.ಎಮ್.ಸಿ ಕಾಲೋನಿ, ಎಕ್ಸ್ ಸರ್ವೀಸ್‍ಮೆನ್ ಕಾಲೋನಿ, ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ಟ್ರಾಮಾಕೇರ್ ಸೆಂಟರ್, ವಿಮ್ಸ್ ಆಸ್ಪತ್ರೆ, ಜಲ ಶುದ್ಧೀಕರಣ ಕೇಂದ್ರ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳು ಹಾಗೂ ಕೊಳಗಲ್ಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ