ಶುಕ್ರವಾರ, ಏಪ್ರಿಲ್ 21, 2023

ದ್ವಿತೀಯ ಪಿಯು ವಾರ್ಷಿಕ ಫಲಿತಾಂಶ ಪ್ರಕಟ: ಬಳ್ಳಾರಿಯು ರಾಜ್ಯಕ್ಕೆ 27ನೇ ಸ್ಥಾನ ಜಿಲ್ಲೆಯಲ್ಲಿ ಶೇ.69.55 ರಷ್ಟು ಪಿಯುಸಿ ಫಲಿತಾಂಶ ಬಳ್ಳಾರಿ,ಏ.21(ಕರ್ನಾಟಕ ವಾರ್ತೆ): ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪ್ರಸಕ್ತ 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 30512 ವಿದ್ಯಾರ್ಥಿಗಳ ಪೈಕಿ 19228 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.69.55 ರಷ್ಟು ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 27 ನೇ ಸ್ಥಾನ ಪಡೆದುಕೊಂಡಿದೆ. ಕಳೆದ 2022 ರಲ್ಲಿ ಶೇ.55.48 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 31 ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ 2023 ರಲ್ಲಿ 27 ನೇ ಸ್ಥಾನ ಪಡೆದುಕೊಂಡಿದೆ. ಪ್ರಸಕ್ತ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು 24210 ಪೈಕಿ 16837, ಪುನರಾವರ್ತಿತ ವಿದ್ಯಾರ್ಥಿಗಳು 5017 ಪೈಕಿ 2069, ಖಾಸಗಿ ವಿದ್ಯಾರ್ಥಿಗಳು 1285 ಪೈಕಿ 322 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಕಲಾ ವಿಭಾಗದಲ್ಲಿ 13503 ವಿದ್ಯಾರ್ಥಿಗಳ ಪೈಕಿ 6829 ಜನ ತೇರ್ಗಡೆ ಹೊಂದಿ, ಶೇ.50.57 ರಷ್ಟು ಫಲಿತಾಂಶವಾದರೆ, ವಾಣಿಜ್ಯ ವಿಭಾಗದಲ್ಲಿ 7958 ಪೈಕಿ 5156 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.64.79, ವಿಜ್ಞಾನ ವಿಭಾಗದಲ್ಲಿ 9051 ವಿದ್ಯಾರ್ಥಿಗಳ ಪೈಕಿ 7243 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.80.02 ರಷ್ಟು ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಗಂಡು ವಿದ್ಯಾರ್ಥಿಗಳ ಶೇ.44.88 ಕ್ಕಿಂತ ಶೇ.57.05 ರಷ್ಟು ಫಲಿತಾಂಶ ಪಡೆಯುವ ಮೂಲಕ ಮಹಿಳೆಯರು ಮೇಲುಗೈ, ವಾಣಿಜ್ಯ ವಿಭಾಗದಲ್ಲಿ ಪುರುಷರು ಶೇ.58.58 ಕ್ಕಿಂತ ಮಹಿಳೆಯರು ಶೇ.71.14 ರಷ್ಟು ತೇರ್ಗಡೆ ಹೊಂದುವ ಮೂಲಕ ಮೇಲುಗೈ ಸಾಧಿಸಿದರೆ, ವಿಜ್ಞಾನ ವಿಭಾಗದಲ್ಲಿ ಪುರುಷ ವಿದ್ಯಾರ್ಥಿಗಳು ಶೇ.79.75 ರಷ್ಟು ತೇರ್ಗಡೆ ಹೊಂದಿದರೆ, ಮಹಿಳಾ ವಿದ್ಯಾರ್ಥಿಗಳು ಶೇ.80.26 ರಷ್ಟು ತೇರ್ಗಡೆ ಹೊಂದಿ ಮೇಲುಗೈ ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 17053 ವಿದ್ಯಾರ್ಥಿಗಳ ಪೈಕಿ 8982 ಜನ ತೇರ್ಗಡೆ ಹೊಂದಿ, ಶೇ.52.67 ರಷ್ಟು ಫಲಿತಾಂಶವಾದರೆ, ಅದರಲ್ಲಿ ಕಲಾ ವಿಭಾಗದಲ್ಲಿ ಶೇ.50.22, ವಾಣಿಜ್ಯ ವಿಭಾಗದಲ್ಲಿ ಶೇ.60.3 ಹಾಗೂ ವಿಜ್ಞಾನ ವಿಭಾಗದಲ್ಲಿ 88.37 ರಷ್ಟು ತೇರ್ಗಡೆ ಹೊಂದಿದ್ದಾರೆ. ಇಂಗ್ಲೀμï ಮಾಧ್ಯಮದಲ್ಲಿ ಒಟ್ಟು 13459 ವಿದ್ಯಾರ್ಥಿಗಳ ಪೈಕಿ 10246 ಜನ ತೇರ್ಗಡೆ ಹೊಂದಿ, ಶೇ.76.13 ರಷ್ಟು ಫಲಿತಾಂಶವಾಗಿದೆ. ಅದರಲ್ಲಿ ಕಲಾ ವಿಭಾಗದಲ್ಲಿ ಶೇ.60.21, ವಾಣಿಜ್ಯ ವಿಭಾಗದಲ್ಲಿ ಶೇ.69.29 ಹಾಗೂ ವಿಜ್ಞಾನ ವಿಭಾಗದಲ್ಲಿ 79.98 ರಷ್ಟು ತೇರ್ಗಡೆ ಹೊಂದಿದ್ದಾರೆ. *ಅಖಂಡ (ಬಳ್ಳಾರಿ ಮತ್ತು ವಿಜಯನಗರ) ಜಿಲ್ಲಾ ಮಟ್ಟದಲ್ಲಿ ಸ್ಥಾನ ಪಡೆದವರ ವಿವರ:* *ಕಲಾ ವಿಭಾಗ:* ಕೊಟ್ಟೂರಿನ ಇಂದು ಇನ್ನೋವೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕುಶಾನಾಯ್ಕ.ಜಿ.ಎಲ್ ಅವರು ಪಡೆದ ಅಂಕ 592 (2ನೇ ರ್ಯಾಂಕ್), ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಡ್ಡಿ ಕರಿಬಸಮ್ಮ ಅವರು ಪಡೆದ ಅಂಕ 592 (2ನೇ ರ್ಯಾಂಕ್), ಹರಪನಹಳ್ಳಿಯ ಎಸ್.ಯು.ಜೆ.ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮುತ್ತೂರು ಮಲ್ಲಮ್ಮ ಅವರು ಪಡೆದ ಅಂಕ 592 (2ನೇ ರ್ಯಾಂಕ್), ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ.ಕೃμÁ್ಣ ಅವರು ಪಡೆದ ಅಂಕ 591 (3ನೇ ರ್ಯಾಂಕ್) ಪಡೆದುಕೊಂಡಿರುತ್ತಾರೆ. *ವಾಣಿಜ್ಯ ವಿಭಾಗ:* ಬಳ್ಳಾರಿಯ ಬಿಪಿಎಸ್‍ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಹಿದರಾ ತುಳಸಿ ಅವರು ಪಡೆದ ಅಂಕ 594 (1ನೇ ಸ್ಥಾನ), ಬಿಪಿಎಸ್‍ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚೆಲ್ಲೂರು ಸಹನಾ ಅವರು ಪಡೆದ ಅಂಕ 593 (2ನೇ ಸ್ಥಾನ), ಶ್ರೀ ಮೇಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪಿ.ಪ್ರತಿಭಾ ಅವರು ಪಡೆದ ಅಂಕ 593 (2ನೇ ಸ್ಥಾನ), ಪ್ಯೂಪಿಲ್ ಟ್ರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರುಶಾಲಿ ಅವರು ಪಡೆದ ಅಂಕ 591 (3ನೇ ಸ್ಥಾನ) ಪಡೆದುಕೊಂಡಿರುತ್ತಾರೆ. *ವಿಜ್ಞಾನ ವಿಭಾಗ:* ಹಗರಿಬೊಮ್ಮನಹಳ್ಳಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆದರ್ಶರೆಡ್ಡಿ ಹರಗೇರಿ ಅವರು ಪಡೆದ ಅಂಕ 590 (1ನೇ ಸ್ಥಾನ), ಬಳ್ಳಾರಿ ನ್ಯೂ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನೋಜ್.ಬಿ.ಆರ್ ಅವರು ಪಡೆದ ಅಂಕ 587 (2ನೇ ಸ್ಥಾನ), ಬಳ್ಳಾರಿಯ ಬೆಳಗಲ್‍ನ ನಂದಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮ.ಅಬ್ದುಲ್ ರೆಹಮಾನ್ ಫಾವಾ ಅವರು 586 ಅಂಕ ಪಡೆದು (3ನೇ ಸ್ಥಾನ) ಪಡೆದುಕೊಂಡಿರುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಗೇಂದ್ರ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ