ಸೋಮವಾರ, ಏಪ್ರಿಲ್ 24, 2023

ಕುರುಗೋಡು: ಕಾವೇರಿ 2.0 ತಂತ್ರಾಂಶ ಅನುಷ್ಠಾನಕ್ಕಾಗಿ ಏ.27 ರಂದು ತರಬೇತಿ ಬಳ್ಳಾರಿ,ಏ.24(ಕರ್ನಾಟಕ ವಾರ್ತೆ): ಕುರುಗೋಡು ತಾಲೂಕು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ 2.0 ತಂತ್ರಾಂಶವನ್ನು ತಾಲೂಕಿನ ಉಪನೋಂದಣಾಧಿಕಾಗಳ ಕಚೇರಿಯಲ್ಲಿ ಮೇ 12 ರಂದು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಂ ಅವರ ಅಧ್ಯಕ್ಷತೆಯಲ್ಲಿ ಕಾವೇರಿ 2.0 ತರಬೇತಿ ಕಾರ್ಯಕ್ರಮವನ್ನು ಏಪ್ರಿಲ್ 27 ರಂದು ಬೆಳಗ್ಗೆ 11ಕ್ಕೆ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಸಾರ್ವಜನಿಕರು, ವಕೀಲರು, ದಸ್ತಾವೇಜು ಬರಹಗಾರರು, ಬ್ಯಾಂಕ್ ಸಿಬ್ಬಂದಿ ಹಾಗೂ ಮಾಧ್ಯಮದವರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆಯಬೇಕೆಂದು ಕುರುಗೋಡು ತಾಲೂಕು ಉಪ ನೋಂದಣಾಧಿಕಾರಿ ತೇಜಸ್ವಿನಿ ಎಲ್ ನಾಯಕ್ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ