ಸೋಮವಾರ, ಏಪ್ರಿಲ್ 24, 2023
ಏ.25ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಏ.24(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಮೀನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಮೆ.ಬಸಾಯಿ ಸ್ಟೀಲ್ ಕಾರ್ಖಾನೆಗೆ ಹೊಸ ಎಕ್ಸ್‍ಪ್ರೆಸ್ 11ಕೆ.ವಿ ಮಾರ್ಗದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಏ.25 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು, ಚಾಗನೂರು ಕೃಷಿ ಪ್ರದೇಶ. ಎಫ್-1 ಫೀಡರ್ ಮೀನಹಳ್ಳಿ/ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು, ಚಾಗನೂರು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ