ಸೋಮವಾರ, ಏಪ್ರಿಲ್ 24, 2023

ಯುವತಿ ಕಾಣೆ ಬಳ್ಳಾರಿ,ಏ.24(ಕರ್ನಾಟಕ ವಾರ್ತೆ): ನಗರದ ಇಂದಿರಾ ಕಾಲೋನಿಯ 4 ನೇ ಕ್ರಾಸ್‍ನ ನಿವಾಸಿಯಾದ ಅಕ್ಷಿತಾ ಸುರೇಶ ಕಾರ್‍ಬಾರಿ ಎನ್ನುವ 18 ವರ್ಷದ ಯುವತಿ ಏ.22 ರಂದು ಕಾಣೆಯಾಗಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಎಎಸ್‍ಐ ಅವರು ತಿಳಿಸಿದ್ದಾರೆ. ಕಾಣೆಯಾದ ಯುವತಿಯ ಚಹರೆ ಗುರುತು: ಸುಮಾರು 4 ರಿಂದ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಬಲಭಾಗದ ಕಪಾಳಕ್ಕೆ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಆರೆಂಜ್ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್, ಲಂಬಾಣಿ ಭಾಷೆಗಳನ್ನು ಮಾತನಾಡುತ್ತಾಳೆ. ಈ ಮೇಲ್ಕಂಡ ಚಹರೆಯುಳ್ಳ ಯುವತಿಯ ಸುಳಿವು ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆಯ ದೂ.08392-268108, ಮೊ.9480803088, ಬಳ್ಳಾರಿ ಎಸ್‍ಪಿ ಅವರ ದೂ.08392-258400, ಡಿಎಸ್‍ಪಿ ಉಪವಿಭಾಗ ಅವರ ದೂ.08392-272322 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ