ಶುಕ್ರವಾರ, ಏಪ್ರಿಲ್ 21, 2023
ಬಳ್ಳಾರಿ ಜಿಲ್ಲೆಗೆ ಸಾಮಾನ್ಯ, ಪೆÇಲೀಸ್, ವೆಚ್ಚ ವೀಕ್ಷಕರ ಆಗಮನ
ಬಳ್ಳಾರಿ,ಏ.21(ಕರ್ನಾಟಕ ವಾರ್ತೆ):
ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ರ ಸಂಬಂಧ ಜಿಲ್ಲೆಗೆ ಸಾಮಾನ್ಯ ವೀಕ್ಷಕರು ಹಾಗೂ ಪೆÇಲೀಸ್ ವೀಕ್ಷಕರು ಆಗಮಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಕಂಪ್ಲಿ ಮತ್ತು ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳಿಗೆ ವಿಜಯಕುಮಾರ್.ಜೆ.ಜಯರಾಮನ್ ಐಎಎಸ್ ಅವರ ಮೊ.9141010820, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಕೆ.ರಾಜಮನಿ ಐಎಎಸ್ ಅವರ ಮೊ.9141010821 ಹಾಗೂ ಬಳ್ಳಾರಿ ನಗರ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಪಿ.ಬಿ. ಪಾಂಡ್ಯಾ ಐಎಎಸ್ ಅವರ ಮೊ.9141010822 ಇವರು ಆಗಮಿಸಿದ್ದಾರೆ.
ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಮಿತ್ ರಾಯ್ ಐಪಿಎಸ್ ಮೊ.9141010823 ಅವರು ಪೆÇಲೀಸ್ ವೀಕ್ಷಕರಾಗಿ ಆಗಮಿಸಿದ್ದಾರೆ.
ಚುನಾವಣಾ ವೆಚ್ಚದ ವೀಕ್ಷಕರಾಗಿ ಕಂಪ್ಲಿ ಮತ್ತು ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳಿಗೆ ರಾವುತ್ ಮನೀಶ್ ಮಹೇಂದ್ರ ಐಸಿಎಎಸ್ ಅವರ ಮೊ.9141010824, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಯುಧಸ್ತ್ ಕುಮಾರ್ ಐಆರ್‍ಎಸ್ ಮೊ. 9141010825 ಹಾಗೂ ಬಳ್ಳಾರಿ ನಗರ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಅನೀಸ್ ಖಾನ್ ಐಆರ್‍ಎಸ್ ಮೊ. 9141010826 ಅವರು ಆಗಮಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಇವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ