ಭಾನುವಾರ, ಏಪ್ರಿಲ್ 23, 2023
ಹನ್ನೆರಡನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ ಬಸವಣ್ಣನವರು: ಪೆÇ್ರ.ಆಲಗೂರ
ಬಳ್ಳಾರಿ,ಏ.23(ಕರ್ನಾಟಕ ವಾರ್ತೆ):
ವಿಶ್ವಗುರು ಬಸವಣ್ಣನವರ ಮೌಲ್ಯ ಮತ್ತು ತತ್ವಾದರ್ಶಗಳು ನಮ್ಮೆಲ್ಲರಿಗೆ ದಾರಿದೀಪವಾಗಿದೆ, ಅವರು ತಮ್ಮ ವಚನಗಳ ಮೂಲಕ ಜಾತಿ ಭೇದ, ಲಿಂಗ-ತಾರತಮ್ಯ ಹಾಗೂ ಮೌಢ್ಯಗಳನ್ನು ತೊಡೆದುಹಾಕಲು ಹನ್ನೆರಡನೇ ಶತಮಾನದಲ್ಲಿ ಧ್ವನಿಯೆತ್ತಿ ಸಾಮಾಜಿಕ ಕ್ರಾಂತಿಕಾರಿಯಾಗಿದ್ದರು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಸಿದ್ದು ಪಿ ಆಲಗೂರÀ ಅವರು ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬಸವಣ್ಣನವರ 890ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕವೆಂದರೆ ಕೇವಲ ಕೆಲಸವಲ್ಲದೆ, ದೇಹವನ್ನೇ ದೇವಾಲಯವನ್ನಾಗಿ ಮಾಡಿ ಮೋಕ್ಷವನ್ನು ಪಡೆಯುವುದೆ ನಿಜವಾದ ಕಾರ್ಯ ಎಂದು ತಿಳಿಸಿದರು. ಅವರ ವಚನಗಳ ಸಾರಾಂಶವನ್ನು ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಪ್ರಜಾ ಪ್ರಭುತ್ವ, ಸಂವಿಧಾನ ವಿಚಾರಗಳನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಪರಿಚಯಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ತೋರಿದ ಹಾದಿಯಲ್ಲಿ ನಡೆಯುತ್ತಾ ಸಮಾನತೆಯ ತತ್ವಗಳನ್ನು ಪಾಲಿಸೋಣ ಎಂದು ಹೇಳಿದರು.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ಡಾ. ಅರುಣಕುಮಾರ ಲಗಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ವಚನಗಳು ರಚನೆಯಾಗಿ ಹಲವಾರು ವರ್ಷಗಳಾಗಿದ್ದರೂ ಅವು ಇಂದಿಗೂ ಪ್ರಚಲಿತವಾಗಿವೆ, ಅವರ ವಚನ ಸಾಹಿತ್ಯವು ಭಾರತವμÉ್ಟೀ ಅಲ್ಲದೆ ವಿಶ್ವದೆಲ್ಲೆಡೆ ಆವರಿಸಿವೆ. ಅವರ ವಚನಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾರುತ್ತವೆ ಎಂದರು.
ಈ ಸಂದರ್ಭದಲ್ಲಿ ಸಿ.ಡಿ.ಸಿ ನಿರ್ದೇಶಕ ಡಾ.ಕೆ.ಸಿ ಪ್ರಶಾಂತ್, ಅನ್ವಯಿಕ ವಿಜ್ಞಾನ ಡೀನರು ಹಾಗೂ ಐಕ್ಯೂಎಸಿ ನಿರ್ದೇಶಕ ಪೆÇ್ರ.ತಿಪ್ಪೇರುದ್ರಪ್ಪ.ಜೆ, ಡಾ.ಶಶಿಧರ ಕೆಲ್ಲೂರ್, ಡಾ.ಅರುಣಕುಮಾರ ಲಗಶೆಟ್ಟಿ, ಡಾ.ನಾಗಭೂಷಣ್.ಸಿ.ಎಂ ಅವರು ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ