ಶನಿವಾರ, ಏಪ್ರಿಲ್ 15, 2023

76,647 ರೂ. ಮೌಲ್ಯದ 120.23 ಲೀ ಮದ್ಯ ವಶ: ಡಿಸಿ ಪವನ್‍ಕುಮಾರ್ ಮಾಲಪಾಟಿ* ಬಳ್ಳಾರಿ,ಏ.15(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಶುಕ್ರವಾರ ಒಟ್ಟು 76,647 ರೂ. ಮೌಲ್ಯದ 120.23 ಲೀ ಮದ್ಯ ವಶಪಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ಅಬಕಾರಿ ಇಲಾಖೆಯಿಂದ ರೂ.68,883 ಮೌಲ್ಯದ 113.57 ಲೀಟರ್ ಮದ್ಯ ಮತ್ತು ಪೆÇಲೀಸ್ ಇಲಾಖೆಯಿಂದ ರೂ.7,764 ಬೆಲೆಯ 6.66 ಲೀಟರ್ ಮದ್ಯ ಸೇರಿದಂತೆ ಒಟ್ಟು 76,647 ರೂ. ಮೌಲ್ಯದ 120.23 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‍ಎಸ್‍ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಈಗಾಗಲೇ ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ