ಬುಧವಾರ, ಏಪ್ರಿಲ್ 26, 2023

ಮತದಾರರನ್ನು ಸೆಳೆಯಲು ಪರಿಸರ ಸ್ನೇಹಿ, ವಿಷಯಧಾರಿತ ಮತಗಟ್ಟೆಗಳ ಸ್ಥಾಪನೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಖಿ, 5 ವಿಶೇಷಚೇತನ, 5 ಯುವ ಮತಗಟ್ಟೆ ಸೇರಿ 12 ಇತರೆ ಮಾದರಿ ಮತಗಟ್ಟೆಗಳ ಸ್ಥಾಪನೆ ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಅಂಗವಾಗಿ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು ಐದು ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಖಿ ಮತಗಟ್ಟೆ, 5 ವಿಶೇಷಚೇತನ ಮತಗಟ್ಟೆ, 5 ಯುವ ಮತಗಟ್ಟೆ ಸೇರಿದಂತೆ 2 ಪರಿಸರ ಸ್ನೇಹಿ ಮತಗಟ್ಟೆ, 6 ಸಾಂಪ್ರದಾಯ ಮತಗಟ್ಟೆ, 3 ವಿಷಯಧಾರಿತ ಮತಗಟ್ಟೆ, 1 ಜಲಾನಯನ ವಿಷಯಧಾರಿತ ಮತಗಟ್ಟೆ ಸೇರಿ 32 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. *ಬೂತ್‍ವಾರು ಸಖಿ, ವಿಶೇಷಚೇತನ, ಯುವ, ಇತರೆ ಮಾದರಿ ಮತಗಟ್ಟೆಗಳ ವಿವರ:* *91-ಕಂಪ್ಲಿ ವಿಧಾನಸಭಾ ಕ್ಷೇತ್ರ:* ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2 ಸಖಿ, 1 ವಿಶೇಷಚೇತನ, 3 ಸಾಂಪ್ರಾದಾಯಿಕ, 1 ವಿಷಯಧಾರಿತ, 1 ಯುವ ಮತಗಟ್ಟೆ ಕೇಂದ್ರಗಳು ಸೇರಿ 8 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಖಿ ಮತಗಟ್ಟೆ: ಬಾದನಹಟ್ಟಿ ಗ್ರಾಮದ ಪಾಂಡುರಂಗ ದೇವಸ್ಥಾನ ಹತ್ತಿರದ 163-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ 724 ಪುರುಷ ಮತದಾರರು, 729 ಮಹಿಳೆ ಮತದಾರರು ಸೇರಿ ಒಟ್ಟು 1,453 ಮತದಾರರು. ಕಂಪ್ಲಿಯ ಸಕ್ಕರೆ ಕಾರ್ಖಾನೆ ಹತ್ತಿರದ 84-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ 672 ಪುರುಷ ಮತದಾರರು, 695 ಮಹಿಳೆ ಮತದಾರರು ಸೇರಿ ಒಟ್ಟು 1,367 ಜನ ಮತದಾರರು. ವಿಶೇಷಚೇತನ ಮತಗಟ್ಟೆ: ಕುರುಗೋಡಿನ ಎಸ್‍ಸಿ ಕಾಲೋನಿಯ 125-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಗೆ 262 ಪುರುಷ ಮತದಾರರು, 273 ಮಹಿಳೆ ಮತದಾರರು ಸೇರಿ ಒಟ್ಟು 535 ಮತದಾರರಿದ್ದಾರೆ. ಯುವ ಮತಗಟ್ಟೆ: ಕಂಪ್ಲಿಯ ಸತ್ಯನಾರಾಯಣ ಪೇಟೆಯ 64-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣ ಭಾಗ ಪಕ್ಕದ ಕೋಣೆ) ವ್ಯಾಪ್ತಿಗೆ 628 ಪುರುಷ ಮತದಾರರು, 617 ಮಹಿಳೆ ಮತದಾರರು, ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 1246 ಜನ ಮತದಾರರು. ವಿಷಯಧಾರಿತ ಮತಗಟ್ಟೆ: ಕೋಳೂರು ಗ್ರಾಮ ಪಂಚಾಯತ್‍ನ 216-ಗ್ರಾಮ ಪಂಚಾಯತ್ ಕಚೇರಿ ವ್ಯಾಪ್ತಿಗೆ 575 ಪುರುಷ ಮತದಾರರು, 583 ಮಹಿಳೆ ಮತದಾರರು ಸೇರಿ ಒಟ್ಟು 1,158 ಜನ ಮತದಾರರು. ಸಾಂಪ್ರಾದಾಯಿಕ ಮತಗಟ್ಟೆ: ಕಂಪ್ಲಿಯ ನೀರಾವರಿ ಉಪವಿಭಾಗ ಕಚೇರಿಯ 67-ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ವ್ಯಾಪ್ತಿಗೆ 558 ಪುರುಷ ಮತದಾರರು, 580 ಮಹಿಳೆ ಮತದಾರರು ಸೇರಿ ಒಟ್ಟು 1,138 ಜನ ಮತದಾರರು. ನೆಲ್ಲುಡಿ ಕೊಟ್ಟಾಲ್‍ನ 154-ಅಂಗನವಾಡಿ ಹೊಸ ಕಟ್ಟಡ ವ್ಯಾಪ್ತಿಗೆ 374 ಪುರುಷ ಮತದಾರರು, 410 ಮಹಿಳೆ ಮತದಾರರು ಸೇರಿ ಒಟ್ಟು 784 ಜನ ಮತದಾರರು. ಸಣಾಪುರದ 2-ಗ್ರಾಮ ಪಂಚಾಯಿತಿ ಕಚೇರಿ ವ್ಯಾಪ್ತಿಗೆ 544 ಪುರುಷ ಮತದಾರರು, 601 ಮಹಿಳೆ ಮತದಾರರು ಸೇರಿ ಒಟ್ಟು 1,145 ಜನ ಮತದಾರರು. *92-ಸಿರುಗುಪ್ಪ ವಿಧಾನಸಭಾ ಕ್ಷೇತ್ರ:* ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 2 ಸಖಿ, 1 ವಿಶೇಷಚೇತನ, 1 ಪರಿಸರ ಸ್ನೇಹಿ, 1 ಸಾಂಪ್ರಾದಾಯಿಕ, 1 ಯುವ ಮತಗಟ್ಟೆ ಕೇಂದ್ರಗಳು ಸೇರಿ 6 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪರಿಸರ ಸ್ನೇಹಿ ಮತಗಟ್ಟೆ: ಅಗಸನೂರಿನ 21-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡ (ಉತ್ತರ ಭಾಗ) ವ್ಯಾಪ್ತಿಗೆ 531 ಪುರುಷ ಮತದಾರರು, 574 ಮಹಿಳೆ ಮತದಾರರು ಸೇರಿ ಒಟ್ಟು 1,105 ಜನ ಮತದಾರರು. ವಿಶೇಷಚೇತನ ಮತಗಟ್ಟೆ: ಸಿರುಗುಪ್ಪ ಪಟ್ಟಣದ ವಾರ್ಡ್ ನಂ.16 ಆಶ್ರಯ ಕಾಲೋನಿ ಹತ್ತಿರ 91-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ವ್ಯಾಪ್ತಿಗೆ 192 ಪುರುಷ ಮತದಾರರು, 199 ಮಹಿಳೆ ಮತದಾರರು ಸೇರಿ ಒಟ್ಟು 391 ಜನ ಮತದಾರರು. ಸಖಿ ಮತಗಟ್ಟೆ: ಸಿರುಗುಪ್ಪ ವಾರ್ಡ್ ನಂ.24ರಲ್ಲಿನ 73-ಸಹಾಯಕ ತೋಟಗಾರಿಕಾ ನಿರ್ದೇಶಕ ಕಚೇರಿ ವ್ಯಾಪ್ತಿಗೆ 428 ಪುರುಷ ಮತದಾರರು, 490 ಮಹಿಳೆ ಮತದಾರರು ಸೇರಿ ಒಟ್ಟು 918 ಜನ ಮತದಾರರು. ರಾರವಿಯ 43-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹಳೆಯ ಕಟ್ಟಡ 6ನೇ ತರಗತಿ ಕೊಠಡಿ) ವ್ಯಾಪ್ತಿಗೆ 563 ಪುರುಷ ಮತದಾರರು, 590 ಮಹಿಳೆ ಮತದಾರರು ಸೇರಿ ಒಟ್ಟು 1153 ಜನ ಮತದಾರರು. ಸಾಂಪ್ರಾದಾಯಿಕ ಮತಗಟ್ಟೆ: ಕೆಂಚನಗುಡ್ಡ ತಾಂಡಾದ 112-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವ್ಯಾಪ್ತಿಯ 466 ಪುರುಷ ಮತದಾರರು, 438 ಮಹಿಳೆ ಮತದಾರರು ಸೇರಿ ಒಟ್ಟು 904 ಜನ ಮತದಾರರು. ಯುವÀ ಮತಗಟ್ಟೆ: ತೆಕ್ಕಲಕೋಟೆಯ 15ನೇ ವಾರ್ಡ್‍ನ 172-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಾಲಕರ) ವ್ಯಾಪ್ತಿಗೆ 512 ಪುರುಷ ಮತದಾರರು, 565 ಮಹಿಳೆ ಮತದಾರರು ಸೇರಿ ಒಟ್ಟು 1,077 ಜನ ಮತದಾರರು. *93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:* ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2 ಸಖಿ, 1 ವಿಶೇಷಚೇತನ, 1 ಯುವ ಮತಗಟ್ಟೆ ಕೇಂದ್ರಗಳು ಸೇರಿ 4 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವಿಶೇಷಚೇತನ ಮತಗಟ್ಟೆ: ಕೊಳಗಲ್ಲು ಗ್ರಾಮದ 4-ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಭಾಗ) ವ್ಯಾಪ್ತಿಗೆ 467 ಪುರುಷ ಮತದಾರರು, 490 ಮಹಿಳೆ ಮತದಾರರು ಸೇರಿ ಒಟ್ಟು 957 ಜನ ಮತದಾರರು. ಯುವÀ ಮತಗಟ್ಟೆ: ಬಳ್ಳಾರಿ ನಗರದ 34-ಜೋಸೆಫ್ ಬಾಲಕಿಯರ ಪ್ರೌಢಶಾಲೆ ವ್ಯಾಪ್ತಿಗೆ 573 ಪುರುಷ ಮತದಾರರು, 583 ಮಹಿಳೆ ಮತದಾರರು ಸೇರಿ ಒಟ್ಟು 1,156 ಜನ ಮತದಾರರು. ಸಖಿ ಮತಗಟ್ಟೆ: ಬಳ್ಳಾರಿ ನಗರದ 52-ಮೊಹಮ್ಮದೀಯ ಆಂಗ್ಲ ಮಾಧ್ಯಮ ಶಾಲೆ ಕೊಠಡಿ ಸಂಖ್ಯೆ 5 ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. 678 ಪುರುಷ ಮತದಾರರು, 725 ಮಹಿಳೆ ಮತದಾರರು ಹಾಗೂ ಒಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರ ಸೇರಿ ಒಟ್ಟು 1,404 ಜನ ಮತದಾರರು. ಇಬ್ರಾಹಿಂಪುರ ಗ್ರಾಮದ 130-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡ (ಉತ್ತರ ಭಾಗ) 326 ಪುರುಷ ಮತದಾರರು, 351 ಮಹಿಳೆ ಮತದಾರರು ಸೇರಿ ಒಟ್ಟು 677 ಜನ ಮತದಾರರು. *94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:* ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 2 ಸಖಿ, 1 ವಿಶೇಷಚೇತನ, 1 ಸಾಂಪ್ರಾದಾಯಿಕ, 1 ವಿಷಯಧಾರಿತ, 1 ಯುವ ಮತಗಟ್ಟೆ ಕೇಂದ್ರಗಳು ಸೇರಿ 6 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಯುವÀ ಮತಗಟ್ಟೆ: ನಗರದ ಮೋಕಾ ರಸ್ತೆಯ ವಾಟರ್ ಬೂಸ್ಟ್ ಎದುರಿನ 42-ಚೈತನ್ಯ ಪಿಯು ಕಾಲೇಜಿನ ಕೊಠಡಿ ಸಂಖ್ಯೆ.1 ಮತಗಟ್ಟೆಯಲ್ಲಿ 491 ಪುರುಷ ಮತದಾರರು, 547 ಮಹಿಳೆ ಮತದಾರರು ಸೇರಿ ಒಟ್ಟು 1,044 ಜನ ಮತದಾರರು. ಸಖಿ ಮತಗಟ್ಟೆ: ನಗರದ ತಾಳೂರು ರಸ್ತೆಯ 44-ಗಂಗೋತ್ರಿ ಶಾಲೆ, ಕೊಠಡಿ ನಂ.2 ಮತಗಟ್ಟೆಯಲ್ಲಿ 624 ಪುರುಷ ಮತದಾರರು, 701 ಮಹಿಳೆ ಮತದಾರರು ಹಾಗೂ ಒಬ್ಬರು ಅಲ್ಪ ಸಂಖ್ಯಾತ ಮತದಾರ ಸೇರಿ ಒಟ್ಟು 1,326 ಜನ ಮತದಾರರು. ಎಸ್.ಎನ್.ಪೇಟೆಯ 123-ಸ.ಸ.ಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತಗಟ್ಟೆಯಲ್ಲಿ 664 ಪುರುಷ ಮತದಾರರು, 665 ಮಹಿಳೆ ಮತದಾರರು ಸೇರಿ ಒಟ್ಟು 1,329 ಜನ ಮತದಾರರು. ವಿಶೇಷಚೇತನ ಮತಗಟ್ಟೆ: ನಗರದ ಅಂಬ್ಲಿಬಾಗ್‍ನ 170-ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನ ಕೊಠಡಿ ನಂ.31ರ ಮತಗಟ್ಟೆಯಲ್ಲಿ 206 ಪುರುಷ ಮತದಾರರು, 213 ಮಹಿಳೆ ಮತದಾರರು ಸೇರಿ ಒಟ್ಟು 419 ಜನ ಮತದಾರರು. ಸಾಂಪ್ರಾದಾಯಿಕ ಮತಗಟ್ಟೆ: ಗಾಂಧಿ ನಗರದ 97-ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಕೊಠಡಿ ನಂ.1 ಮತಗಟ್ಟೆಯಲ್ಲಿ 484 ಪುರುಷ ಮತದಾರರು, 491 ಮಹಿಳೆ ಮತದಾರರು ಸೇರಿ ಒಟ್ಟು 975 ಜನ ಮತದಾರರು. ವಿಷಯಧಾರಿತ ಮತಗಟ್ಟೆ: ನಗರದ ಕಾಳಮ್ಮ ರಸ್ತೆಯ 177-ವಾಡ್ರ್ಲಾ ಜೂನಿಯರ್ ಕಾಲೇಜ್, ನ್ಯೂ ಬ್ಲಾಕ್, ರೂಮ್ ನಂ.35 ಮತಗಟ್ಟೆಯಲ್ಲಿ 368 ಪುರುಷ ಮತದಾರರು, 378 ಮಹಿಳೆ ಮತದಾರರು ಸೇರಿ ಒಟ್ಟು 746 ಜನ ಮತದಾರರು. *95-ಸಂಡೂರು ವಿಧಾನಸಭಾ ಕ್ಷೇತ್ರ:* ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 2 ಸಖಿ, 1 ವಿಶೇಷಚೇತನ, 1 ಪರಿಸರ ಸ್ನೇಹಿ, 1 ಸಾಂಪ್ರಾದಾಯಿಕ, 1 ವಿಷಯಧಾರಿತ, 1 ಯುವ ಮತಗಟ್ಟೆ ಹಾಗೂ 1 ಜಲಾಯನ ವಿಷಯಧಾರಿತ ಮತಗಟ್ಟೆ ಕೇಂದ್ರಗಳು ಸೇರಿ 8 ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 2 ಸಖಿ ಮತಗಟ್ಟೆ: ಹಳೆಯ ಕೆಇಬಿ ಹತ್ತಿರದ ದಕ್ಷಿಣ ಭಾಗದ 60-ಸರ್ಕಾರಿ ಸಂಯೋಜಿತ ಉರ್ದು ಪ್ರೌಢಶಾಲೆ ಮತಗಟ್ಟೆಯಲ್ಲಿ 268 ಪುರುಷ ಮತದಾರರು, 274 ಮಹಿಳೆ ಮತದಾರರು ಸೇರಿ ಒಟ್ಟು 542 ಜನ ಮತದಾರರು. ತೋರಣಗಲ್ಲಿನ ಬೈಪಾಸ್ ರಸ್ತೆಯ ದಕ್ಷಿಣ ಭಾಗದ 117-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 416 ಪುರುಷ ಮತದಾರರು, 444 ಮಹಿಳೆ ಮತದಾರರು ಸೇರಿ ಒಟ್ಟು 860 ಜನ ಮತದಾರರು. 1 ವಿಶೇಷಚೇತನ ಮತಗಟ್ಟೆ: ಸಂಡೂರಿನ ದಕ್ಷಿಣ ಭಾಗದ 62-ಪುರಸಭೆ ಮತಗಟ್ಟೆಯಲ್ಲಿ 318 ಪುರುಷ ಮತದಾರರು, 311 ಮಹಿಳೆ ಮತದಾರರು ಸೇರಿ ಒಟ್ಟು 629 ಜನ ಮತದಾರರು. 1 ಯುವÀ ಮತಗಟ್ಟೆ: ಸಂಡೂರಿನ 66-ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಸ್ ಕಚೇರಿ (ಜಿಪಂ) ಮತಗಟ್ಟೆಯಲ್ಲಿ 443 ಪುರುಷ ಮತದಾರರು, 430 ಮಹಿಳೆ ಮತದಾರರು ಸೇರಿ ಒಟ್ಟು 873 ಜನ ಮತದಾರರು. 1 ಪರಿಸರ ಸ್ನೇಹಿ ಮತಗಟ್ಟೆ: ದೋಣಿಮಲೈನ ಎನ್‍ಎಂಡಿಸಿಯ 23-ಕೇಂದ್ರೀಯ ವಿದ್ಯಾಲಯದ ಕೊಠಡಿ ಸಂಖ್ಯೆ.1 ಮತಗಟ್ಟೆಯಲ್ಲಿ 436 ಪುರುಷ ಮತದಾರರು, 399 ಮಹಿಳೆ ಮತದಾರರು ಸೇರಿ ಒಟ್ಟು 835 ಜನ ಮತದಾರರು. 1 ವಿಷಯಧಾರಿತ ಮತಗಟ್ಟೆ: ಸುಶೀಲಾನಗರದ 6-ಗ್ರಾಮ ಪಂಚಾಯಿತಿ ಕಚೇರಿ ಮತಗಟ್ಟೆಯಲ್ಲಿ 526 ಪುರುಷ ಮತದಾರರು, 518 ಮಹಿಳೆ ಮತದಾರರು ಸೇರಿ ಒಟ್ಟು 1044 ಜನ ಮತದಾರರು. 1 ಸಾಂಪ್ರಾದಾಯಿಕ ಮತಗಟ್ಟೆ: ವೆಂಕಟಗಿರಿಯ 2-ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ 522 ಪುರುಷ ಮತದಾರರು, 473 ಮಹಿಳೆ ಮತದಾರರು ಹಾಗೂ ಒಬ್ಬ ಅಲ್ಪ ಸಂಖ್ಯಾತ ಮತದಾರ ಸೇರಿ ಒಟ್ಟು 996 ಜನ ಮತದಾರರು. 1 ಜಲಾನಯನ ವಿಷಯಧಾರಿತ ಮತಗಟ್ಟೆ: ಉತ್ತರಮಲೈನ 196-ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 271 ಪುರುಷ ಮತದಾರರು, 245 ಮಹಿಳೆ ಮತದಾರರು ಸೇರಿ ಒಟ್ಟು 516 ಜನ ಮತದಾರರು. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಮತ್ತು ಮತದಾರರನ್ನು ವಿಶೇಷವಾಗಿ ಆಕರ್ಷಿಸಲು ಚುನಾವಣಾ ಆಯೋಗವು ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ