ಶನಿವಾರ, ಏಪ್ರಿಲ್ 29, 2023

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ನಗರದ ನಟರಾಜ್ ಟಾಕೀಸ್ ಹತ್ತಿರದ ಪುತ್ತೂರು ಆಸ್ಪತ್ರೆ ರಸ್ತೆಯ ವಿಶಾಲ್ ಹಾರ್ಡ್‍ವೇರ್ ಶಾಪ್ ಮುಂಭಾಗ ಸುಮಾರು 40-45 ವರ್ಷದ ಅನಾಮಧೇಯ ವ್ಯಕ್ತಿಯು ಏ.28 ರಂದು ಬೆಳಗ್ಗೆ 09 ಕ್ಕೆ ಯಾವುದೋ ಖಾಯಿಲೆಯಿಂದ ಬಳಲಿ ಅಸ್ವಸ್ಥನಾಗಿ ಸಾವನ್ನಪ್ಪಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಅಂದಾಜು 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದು, ತಲೆಯಲ್ಲಿ ಸುಮಾರು 2 ಇಂಚು ಉದ್ದನೇಯ ಕಪ್ಪು ಕೂದಲು ಇರುತ್ತವೆ. ನೀಲಿ ಮತ್ತು ಬಿಳಿ ಗೆರೆಯುಳ್ಳ ತುಂಬು ತೋಳಿನ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ