ಶುಕ್ರವಾರ, ಏಪ್ರಿಲ್ 14, 2023
*ಚುನಾವಣಾ ಆಯೋಗದಿಂದ ವೆಚ್ಚ ವೀಕ್ಷಕರ ನೇಮಕ*
ಬಳ್ಳಾರಿ,ಏ.14(ಕರ್ನಾಟಕ ವಾರ್ತೆ): ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ಸಂಬಂಧಿಸಿದಂತೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸುವ ಸಲುವಾಗಿ, ಚುನಾವಣಾ ಆಯೋಗವು ಜಿಲ್ಲೆಗೆ ಮೂವರು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
91-ಕಂಪ್ಲಿ ವಿಧಾನಸಭಾ ಕ್ಷೇತ್ರ ಮತ್ತು 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ರಾವುತ್ ಮನೀಶ್ ಮಹೇಂದ್ರ ಮೊ.9141010824, ಬಳ್ಳಾರಿ ಗ್ರಾಮೀಣ-93 ವಿಧಾನಸಭಾ ಕ್ಷೇತ್ರಕ್ಕೆ ಯುಧಸ್ತ್ ಕುಮಾರ್ ಅವರ ಮೊ.9141010825, ಬಳ್ಳಾರಿ ನಗರ-94 ವಿಧಾನಸಭಾ ಕ್ಷೇತ್ರ ಮತ್ತು 95-ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅನಿಸ್ ಖಾನ್ ಮೊ.9141010826 ಅವರು ನೇಮಕಗೊಂಡಿದ್ದು, ಇವರು ಅಧಿಸೂಚನೆ ದಿನದಿಂದ ನಿಯೋಜನೆಗೊಂಡಿರುತ್ತಾರೆ. ಚುನಾವಣೆ ಅಕ್ರಮ ಕಂಡುಬಂದಲ್ಲಿ ನೇರವಾಗಿ ಇವರನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ