ಸೋಮವಾರ, ಏಪ್ರಿಲ್ 24, 2023

ಸಂಡೂರು ವಿಧಾನಸಭಾ ಚುನಾವಣೆ: ಚುನಾವಣೆಗೆ ಸ್ವರ್ಧಿಸುತ್ತಿರುವ ಅಭ್ಯರ್ಥಿಗಳ ಲೆಕ್ಕಪತ್ರಗಳನ್ನು ವೆಚ್ಚವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಲು ಸೂಚನೆ ಬಳ್ಳಾರಿ,ಏ.24(ಕರ್ನಾಟಕ ವಾರ್ತೆ): ಸಂಡೂರು ವಿಧಾನಸಭೆ ಕ್ಷೇತ್ರ ಚುನಾವಣೆಗೆ ಸ್ವರ್ಧಿಸುತ್ತಿರುವ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಅವಧಿಯೊಳಗೆ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಬೇಕು ಎಂದು 95-ಸಂಡೂರು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಶರಣಬಸವರಾಜ ಅವರು ತಿಳಿಸಿದ್ದಾರೆ. ಚುನಾವಣೆ ಪ್ರಚಾರ ಅವಧಿಯೊಳಗೆ ಚುನಾವಣಾ ವೆಚ್ಚದ ಲೆಕ್ಕ ಪತ್ರಗಳನ್ನು ಕಡ್ಡಾಯವಾಗಿ ಕನಿಷ್ಠ 3 ಬಾರಿ ಚುನಾವಣಾ ವೆಚ್ಚ ವೀಕ್ಷಕರಿಂದ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಚುನಾವಣೆ ಆಯೋಗ ನೀಡಿರುವ ಹಾಗೂ ತಾವು ನಿರ್ವಹಿಸುತ್ತಿರುವ (ಭಾಗ-ಎ, ಭಾಗ-ಬಿ ಮತ್ತು ಭಾಗ-ಸಿ ಪುಸ್ತಕಗಳು) ಬ್ಯಾಂಕ್ ಪುಸ್ತಕ, ಬಿಲ್ಸ್, ವೋಚರ್ಸ್ ಹಾಗೂ ಇತರೆ ಚುನಾವಣೆ ಲೆಕ್ಕಪತ್ರಗಳ ಪರಿಶೀಲನೆಗಾಗಿ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಮೊದಲನೇ ಪರಿಶೀಲನೆಯು ಏ.28 ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ, ಎರಡನೇ ಪರಿಶೀಲನೆಯು ಮೇ 03 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಹಾಗೂ ಮೂರನೇ ಮತ್ತು ಅಂತಿಮ ಪರಿಶೀಲನೆಯು ಮೇ 09 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಂಡೂರು ತಹಶೀಲ್ದಾರರ ಕಾರ್ಯಾಲಯದಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗುವುದು. ಲೆಕ್ಕಪತ್ರಗಳ ಪರಿಶೀಲನೆಯು ಕಡ್ಡಾಯವಾಗಿದ್ದು, ಚುನಾವಣೆಗೆ ಸ್ವರ್ಧಿಸುವ ಅಭ್ಯರ್ಥಿ ಅಥವಾ ಆತನ ಏಜೆಂಟ್‍ದಾರರು ಎಲ್ಲಾ ಮೂಲ ದಾಖಲಾತಿಗಳನ್ನು ಅಪ್‍ಡೇಟ್ ಮಾಡಿಕೊಂಡು ನಿಗದಿಪಡಿಸಿದ ದಿನದಂದು ಲೆಕ್ಕ ಪತ್ರಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು ಎಂದು ಚುನಾವಣಾಧಿಕಾರಿ ಶರಣಬಸವರಾಜ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ