ಶುಕ್ರವಾರ, ಏಪ್ರಿಲ್ 14, 2023
*ಆಸ್ತಿ ತೆರಿಗೆಯನ್ನು ಜೂ.30ರೊಳಗಾಗಿ ಪಾವತಿಸಿ; ಇಲ್ಲದಿದ್ದರೆ ದಂಡ*
ಬಳ್ಳಾರಿ,ಏ.14(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿಯಲ್ಲಿ ಆಸ್ತಿ ಮಾಲೀಕರು ಸಕಾಲದಲ್ಲಿ ತಮ್ಮ ಆಸ್ತಿಗಳಿಗೆ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ವಲಯ 3ರ ವಲಯ ಅಧಿಕಾರಿ ಅಬ್ದುಲ್ ರೆಹಮಾನ್ ಅವರು ತಿಳಿಸಿದ್ದಾರೆ.
2023-24ನೇ ಸಾಲಿನ ಎಸ್.ಎ.ಎಸ್.ನಲ್ಲಿ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ಮತ್ತು ಅದಕ್ಕೂ ಮೊದಲು ಪಾವತಿಸಿದಲ್ಲಿ ತೆರಿಗೆಯ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ದಂಡವಿಲ್ಲದೇ ಪಾವತಿಸಲು ಜೂನ್ 30 ರವರೆಗೆ ಅವಕಾಶ ನೀಡಲಾಗಿದೆ. ಜುಲೈ 1 ರಿಂದ ಆಸ್ತಿ ತೆರಿಗೆ ಪಾವತಿಸುವುದಾದರೆ ಶೇ.2 ದರದಲ್ಲಿ ಪ್ರತಿ ತಿಂಗಳು ಸಂದಾಯ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ