ಬುಧವಾರ, ಏಪ್ರಿಲ್ 26, 2023

ಸಿರುಗುಪ್ಪ ವಿಧಾನಸಭಾ ಚುನಾವಣೆ: ಚುನಾವಣಾ ಅಭ್ಯರ್ಥಿಗಳ ವೆಚ್ಚ ಲೆಕ್ಕಪತ್ರಗಳ ಪರಿಶೀಲನೆಗೆ ದಿನ ಮತ್ತು ಸ್ಥಳ ಬದಲಾವಣೆ ಬಳ್ಳಾರಿ,ಏ.26(ಕರ್ನಾಟಕ ವಾರ್ತೆ): ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಭ್ಯರ್ಥಿಗಳ ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಪರಿಶೀಲನೆಗೆ ಹಾಜರುಪಡಿಸಲು ನಿಗದಿಯಾಗಿದ್ದ ದಿನ ಮತ್ತು ಸ್ಥಳ ಬದಲಾವಣೆಗೊಂಡಿದೆÉ. ಮರು ನಿಗದಿಪಡಿಸಿದ ದಿನ ಮತ್ತು ಸ್ಥಳ ವಿವರ: ಮೊದಲನೇ ಪರಿಶೀಲನೆಯು ಏ.30 ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ, ಎರಡನೇ ಪರಿಶೀಲನೆಯು ಮೇ 4 ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಹಾಗೂ ಮೂರನೇ ಪರಿಶೀಲನೆಯು ಮೇ 8 ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿರುಗುಪ್ಪದ ಸರ್ಕಾರಿ ವಸತಿ ಗೃಹ (ಐ.ಬಿ)ಯಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗುವುದು. ಅಭ್ಯರ್ಥಿಗಳು ಬದಲಾವಣೆಗೊಂಡ ದಿನ ಹಾಗೂ ಸ್ಥಳದ ಅನ್ವಯ ಲೆಕ್ಕಪತ್ರಗಳ ಪರಿಶೀಲನೆಗೆ ಹಾಜರಾಗಬೇಕು ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಸತೀಶ್ ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ