ಶುಕ್ರವಾರ, ಏಪ್ರಿಲ್ 7, 2023
69.120 ಲೀ ಮದ್ಯ, 31.680 ಲೀ. ಬೀರ್ ವಶ
ಬಳ್ಳಾರಿ,ಏ.7(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ತೋಕನಹಳ್ಳಿ ತಾಂಡಾದ ವಾಲ್ಯನಾಯ್ಕ್ ತಂದೆ ಢಾಕನಾಯ್ಕ್ ಇವರ ಕಿರಾಣಿ ಅಂಗಡಿಯ ಮೇಲೆ ಬುಧವಾರ ಅಬಕಾರಿ ನಿರೀಕ್ಷಕ ತುಕಾರಾಮ ನಾಯ್ಕ ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಮೇರೆಗೆ ದಾಳಿ ಮಾಡಿದ ಸಮಯದಲ್ಲಿ, ಅಂಗಡಿಯ ಪಕ್ಕದ ಒಂದು ಕೊಣೆಯಲ್ಲಿ 12 ಮದ್ಯದ ಪೆಟ್ಟಿಗೆಗಳು ಪತ್ತೆಯಾಗಿದ್ದು, ಒಟ್ಟು 69.120 ಲೀಟರ್ ಮದ್ಯ ಹಾಗೂ 31.680 ಲೀಟರ್ ಬೀರ್ ಸಂಗ್ರಹಣೆ ಮಾಡಿರುವುದನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ