ಶುಕ್ರವಾರ, ಏಪ್ರಿಲ್ 7, 2023
ಪಾಲಿಕೆಯಿಂದ ಮತದಾನ ಜಾಗೃತಿ
ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ ಜಾಥಾ
ಬಳ್ಳಾರಿ,ಏ.07(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ ಶುಕ್ರವಾರ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ಮತದಾನ ಜಾಗೃತಿ ನಡೆಯಿತು.
ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಪ್ರತಿಯೊಬ್ಬ ನಾಗರಿಕರು ಮತದಾನ ಚಲಾಯಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಭಾಗಿಯಾಗುವಿಕೆ ಮತ್ತು ಮತದಾನದಿಂದ ಯಾರೂ ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ಮಹಾನಗರ ಪಾಲಿಕೆ ಘನ ತ್ಯಾಜ್ಯ ವಸ್ತು ನಿರ್ವಹಣ ಮತ್ತು ಕಸ ವಿಲೇವಾರಿ ಘಟಕ ವಾಹನಗಳ ಮೂಲಕ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ಮತದಾನ ಜಾಗೃತಿ ಮೂಡಿಸುವ ವಾಹನಗಳಿಗೆ 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಆಗಿರುವ ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರು, ಸುಧಾ ಕ್ರಾಸ್ ಹತ್ತಿರದ ಸೇಂಟ್ ಜೋಸೆಫ್ ಬಾಲಕಿಯರ ಶಾಲೆ ಮುಂಭಾಗ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಲಯ ಅಧಿಕಾರಿ ಅಬ್ದುಲ್ ರೆಹಮಾನ್, ಪರಿಸರ ಅಭಿಯಂತರರಾದ ಶ್ರೀನಿವಾಸ, ಹರ್ಷವರ್ಧನ, ಕಿರಣ್ ಕುಮಾರ್, ವಾಹನ ಶಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ತಿಪ್ಪೇಸ್ವಾಮಿ ಸೇರಿದಂತೆ ಸಂಚಾರಿ ಪೆÇಲೀಸ್ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.
ಮತದಾನ ಜಾಗೃತಿ ಮೂಡಿಸುವ ವಾಹನಗಳು ಸೇಂಟ್ ಜೋಸೆಫ್ ಬಾಲಕಿಯರ ಶಾಲೆಯಿಂದ ಆರಂಭವಾಗಿ ಇನ್‍ಫೆಂಟ್ರಿ ರಸ್ತೆ, ಅಗ್ನಿಶಾಮಕ ದಳ ಕಚೇರಿಯಿಂದ ಎಸ್‍ಪಿ ವೃತ್ತ ಮಾರ್ಗವಾಗಿ ದುರ್ಗಮ್ಮ ಗುಡಿ ಮೂಲಕ ಕೆಇಬಿ ವೃತ್ತ, ಸಂಗಂ ವೃತ್ತದಿಂದ ಬೆಂಗಳೂರು ರಸ್ತೆ ಮೂಲಕ ಜೈನ್ ಮಾರ್ಕೆಟ್ ಮಾರ್ಗವಾಗಿ ಮೋತಿ ವೃತ್ತದಿಂದ ರಂಗಮಂದಿರ, ಕೌಲ್‍ಬಜಾರ್ ಮೊದಲನೇ ಗೇಟ್‍ನಿಂದ ಟಿಬಿ ಆಸ್ಪತ್ರೆ ಮಾರ್ಗವಾಗಿ ರೇಡಿಯೋ ಪಾರ್ಕ್‍ನಿಂದ ಮರಳಿ ಕೌಲ್ ಬಜಾರ್ ಮೊದಲನೇ ಗೇಟ್ ಹತ್ತಿರ ಕೊನೆಗೊಂಡಿತು.
ಜಾಥಾದಲ್ಲಿ 150 ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳು ಪಾಲ್ಗೊಂಡಿದ್ದು, ಸಾರ್ವಜನಿಕರನ್ನು ಗಮನಸೆಳೆಯಿತು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)













ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ