ಮಂಗಳವಾರ, ಏಪ್ರಿಲ್ 11, 2023
ಏ.12ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಏ.11(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11 ಕೆ.ವಿ ಕುಡುತಿನಿ ಉಪ-ಕೇಂದ್ರದಲ್ಲಿ 110ಕೆ.ವಿ ಪರಿವರ್ತಕದ ಸಿಟಿ (ಅuಡಿಡಿeಟಿಣ ಖಿಡಿಚಿಟಿsಜಿoಡಿmeಡಿ) ಬದಲಾವಣೆ ಕಾರ್ಯ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಏ.12 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-1 ಫೀಡರ್‍ನ ದರೋಜಿ ಐ.ಪಿ ಮಾರ್ಗದ ಏಳುಬೆಂಚಿ, ಸಿದ್ದಮ್ಮನಹಳ್ಳಿ, ಯರ್ರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷ್ಮಿ ಕ್ಯಾಂಪ್ ಮುಂತಾದ ಐ.ಪಿ ಸೆಟ್‍ಗಳು. ಎಫ್-2 ಫೀಡರ್‍ನ ತಿಮ್ಮಲಾಪುರ ಎನ್.ಜೆ.ವೈ ಮಾರ್ಗದ ತಿಮ್ಮಲಾಪುರ, ಏಳುಬೆಂಜಿ, ಬಸವಣ್ಣ ಕ್ಯಾಂಪ್ ಗ್ರಾಮಗಳು. ಎಫ್-3 ಫೀಡರ್‍ನ 400 ಕೆ.ಪಿ.ಟಿ.ಸಿಎಲ್ ಮತ್ತು ಬಿ.ಪಿ.ಎಸ್ ಮಾರ್ಗದ ಪಾವಮಾನವ್, ರಾಘವೇಂದ್ರ ಕೆಮಿಕಲ್ಸ್ ಕೈಗಾರಿಕೆ ಪ್ರದೇಶ. ಎಫ್-4 ಫೀಡರ್‍ನ ಕುಡುತಿನಿ ಮಾರ್ಗದ ಕುಡುತಿನಿ ನಗರ, ವೇಣಿವೀರಾಪುರ ಗ್ರಾಮಗಳು. ಎಫ್-5 ಫೀಡರ್‍ನ ವೇಣಿವೀರಾಪುರ ಕೈಗಾರಿಕೆ ಪ್ರದೇಶ ಮಾರ್ಗದ ವೇಣಿವೀರಾಪುರ ಕೈಗಾರಿಕೆ ಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ