ಸೋಮವಾರ, ಮೇ 1, 2023
ವಿಧಾನಸಭೆ ಸಾರ್ವತ್ರಿಕ ಚುನಾವಣೆ
ವಿಶೇಷ ಮತದಾನ ವ್ಯವಸ್ಥೆ; ಎರಡನೇ ದಿನ 04 ಜನ ಮತದಾನ
ಬಳ್ಳಾರಿ,ಮೇ.01(ಕರ್ನಾಟಕ ವಾರ್ತೆ):
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ 80 ವರ್ಷ ಮೇಲ್ಪಟ್ಟ, ವಿಶೇಷಚೇತನ ಹಾಗೂ ಗೈರು ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಮನೆ ಮನೆ ಮತದಾನದ ಪ್ರಕ್ರಿಯೆ ಜಾರಿ ಮಾಡಿದ್ದು, ಈ ಸಂಬಂಧ ವಿಶೇಷ ಮತದಾನ ವ್ಯವಸ್ಥೆಯಲ್ಲಿ ಎರಡನೇ ದಿನವಾದ ಭಾನುವಾರ (ಏ.30 ರಂದು) 4 ಜನ ಮತದಾರರು ತಮ್ಮ ಮತವನ್ನು ಮನೆಯಿಂದಲೇ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಅಂಕಿ-ಅಂಶ:
ಕಂಪ್ಲಿ ವಿಧಾನಸಭಾ ಕ್ಷೇತ್ರ: 91-ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 54 ಜನ ಮತದಾರರ ಪೈಕಿ 46 ಜನ ಮತದಾರರು ಮತದಾನ ಮಾಡಿದ್ದಾರೆ ಮತ್ತು 10 ಜನ ವಿಶೇಷಚೇತನರು ನೊಂದಾಯಿಸಿಕೊಂಡಿದ್ದ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 64 ಜನ ಮತದಾರರಲ್ಲಿ 56 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಗೊಂಡಿದ್ದ 80 ವರ್ಷ ಮೇಲ್ಪಟ್ಟವರ ಪೈಕಿ 5 ಜನ ಮೃತರಾಗಿದ್ದಾರೆ. 3 ಜನ ಮತದಾರರು ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು, ಮೇ 02 ರಂದು 2 ನೇ ಭೇಟಿ ನಿಗದಿ ಮಾಡಲಾಗಿದೆ.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ: 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 12 ಮತದಾರರ ಪೈಕಿ 10 ಜನ ಮತದಾನ ಮಾಡಿದ್ದು, 4 ವಿಶೇಷ ಚೇತನರಲ್ಲಿ 4 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 16 ಜನ ಮತದಾರರಲ್ಲಿ 12 ಜನ ಮತದಾನ ಮಾಡಿದ್ದು, ಮತದಾನಕ್ಕೆ ನೊಂದಣಿಯಾಗಿದ್ದ 80 ವರ್ಷ ಮೇಲ್ಪಟ್ಟ 2 ಜನ ಮೃತಪಟ್ಟಿದ್ದು, ಪೂರ್ಣ ಪ್ರಮಾಣ ಮತದಾನವಾಗಿದೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ: 93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 3 ಮತದಾರರ ಪೈಕಿ 3 ಜನ ಮತದಾನ ಮಾಡಿದ್ದು, ಒಬ್ಬ ವಿಶೇಷ ಚೇತನರು ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 4 ಜನ ಮತದಾರರಲ್ಲಿ 4 ಜನ ಮತದಾನ ಮಾಡಿದ್ದು, ಪೂರ್ಣ ಪ್ರಮಾಣ ಮತದಾನವಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 147 ಮತದಾರರ ಪೈಕಿ 136 ಜನ ಮತದಾನ ಮಾಡಿದ್ದು, 11 ವಿಶೇಷ ಚೇತನ ಮತದಾರರಲ್ಲಿ 11 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 158 ಜನ ಮತದಾರರಲ್ಲಿ 147 ಜನ ಮತದಾನ ಮಾಡಿದ್ದಾರೆ.
ಎರಡನೇ ಭೇಟಿಯಲ್ಲಿ ಭಾನುವಾರ(ಏ.30 ರಂದು) 4 ಜನ ಮತದಾನ ಮಾಡಿದ್ದಾರೆ. 4 ಜನ ಮತದಾರು ಮೃತರಾಗಿದ್ದು, 6 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರು ಸ್ಥಳಾಂತರಗೊಂಡಿರುತ್ತಾರೆ.
ಸಂಡೂರು ವಿಧಾನಸಭಾ ಕ್ಷೇತ್ರ: 95-ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 25 ಮತದಾರರ ಪೈಕಿ 23 ಜನ ಮತದಾನ ಮಾಡಿದ್ದು, 10 ವಿಶೇಷ ಚೇತನ ಮತದಾರರಲ್ಲಿ 10 ಜನ ಮತದಾನ ಮಾಡಿದ್ದಾರೆ. ನೊಂದಾಯಿಸಿಕೊಂಡಿದ್ದ ಒಟ್ಟು 35 ಜನ ಮತದಾರರಲ್ಲಿ 33 ಜನ ಮತದಾನ ಮಾಡಿದ್ದಾರೆ. ಅದರಲ್ಲಿ 80 ವರ್ಷ ಮೇಲ್ಪಟ್ಟ 2 ಮತದಾರರು ಮೃತರಾಗಿದ್ದಾರೆ. ಪೂರ್ಣ ಪ್ರಮಾಣ ಮತದಾನವಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ 241 ಜನ 80 ವರ್ಷ ಮೇಲ್ಪಟ್ಟ ಮತದಾರರಲ್ಲಿ 218 ಜನ ಮತದಾನ ಮಾಡಿದ್ದು, 13 ಜನ ಮತದಾರರು ಮೃತರಾಗಿದ್ದಾರೆ ಹಾಗೂ 36 ವಿಕಲಚೇತನ ಮತದಾರರು ಇದ್ದು, 36 ವಿಕಲಚೇತನರು ಮನೆಯಿಂದಲೇ ಮತ ಚಲಾವಣೆ ಮಾಡಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 12ಡಿ ಫಾರಂ ಅಡಿ ನೊಂದಾಯಿಸಿಕೊಂಡಿದ್ದ 277 ಮತದಾರರ ಪೈಕಿ 254 ಜನರ ಮತ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ