ಬುಧವಾರ, ಏಪ್ರಿಲ್ 12, 2023
ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ಪ್ರಯುಕ್ತ ನಾಮಪತ್ರ ಸಲ್ಲಿಕೆ,
ಚುನಾವಣಾಧಿಕಾರಿಗಳ ಕಚೇರಿ ಸುತ್ತ 100 ಮೀ ವ್ಯಾಪ್ತಿ ನಿಷೇಧಿತ ಪ್ರದೇಶವೆಂದು ಘೋಷಿಸಿ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಆದೇಶ
ಬಳ್ಳಾರಿ,ಏ.12(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ಪ್ರಯುಕ್ತ ಏ.13ರಿಂದ 24 ರವರೆಗೆ ನಾಮಪತ್ರಗಳನ್ನು ಸಲ್ಲಿಸುವ ಸಮಯದಲ್ಲಿ ನಡೆಯಬಹುದಾದ ಅವ್ಯವಹಾರಗಳನ್ನು ತಡೆಗಟ್ಟಲು, ಸಹಾಯಕ ಆಯುಕ್ತರು ಹಾಗೂ ಉಪ-ವಿಭಾಗ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿನ 93-ಬಳ್ಳಾರಿ ಗ್ರಾಮೀಣ(ಪ.ಪಂ) ವಿಧಾನ ಸಭಾ ಕ್ಷೇತ್ರ ಮತ್ತು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿನ 94-ಬಳ್ಳಾರಿ ನಗರ (ಸಾಮಾನ್ಯ) ವಿಧಾನಸಭಾ ಕ್ಷೇತದ ಚುನಾವಣಾಧಿಕಾರಿಗಳ ಕಾರ್ಯಾಲಯದ ಸುತ್ತಲೂ 100 ಮೀಟರ್ ಆವರಣವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ತಾಲ್ಲೂಕು ದಂಡಾಧಿಕಾರಿಯಾಗಿರುವ ಬಲರಾಮ ಕಟ್ಟಿಮನಿ ಅವರು ಆದೇಶ ಹೊರಡಿಸಿದ್ದಾರೆ.
ಸದರಿ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿರುತ್ತದೆ ಮತ್ತು ನಾಮಪತ್ರ ಸಲ್ಲಿಕೆಗೆ ಬರುವ ಅಭ್ಯರ್ಥಿಯ ಜೊತೆಗೆ ಕೇವಲ 04 ಸಂಗಡಿಗರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಲು ಕೇವಲ 03(ಮೂರು) ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕಚೇರಿಯ 100 ಮೀಟರ್ ಒಳಗಡೆ ವಾಹನಗಳನ್ನು ತರುವಂತಿಲ್ಲ. ಸದರಿ ಆದೇಶವು ಈ ಎರಡು ಕಾರ್ಯಾಲಯದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ
ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ