ಭಾನುವಾರ, ಏಪ್ರಿಲ್ 2, 2023
ಮತದಾನ ಅಂಗವಾಗಿ ಸೈಕಲ್ ಜಾಥಾ
ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಅರಿವು
ಬಳ್ಳಾರಿ,ಏ.2(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಮತ್ತು ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಭಾನುವಾರ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ರಾಹುಲ್ ಶರಣಪ್ಪ ಸಂಕನೂರು ಅವರು ಸೈಕಲ್ ಸವಾರಿ ಮಾಡುವುದರ ಮೂಲಕ ಸೈಕಲ್ ಜಾಥಾ ಆರಂಭಗೊಂಡಿತು.
ಮತದಾನ ಜಾಗೃತಿ ಮೂಡಿಸುವ ಸೈಕಲ್ ಜಾಥಾವು ಐಟಿಐ ಕಾಲೇಜ್ ಮೈದಾನದಿಂದ ಆರಂಭವಾಗಿ ರೇಡಿಯೋ ಪಾರ್ಕ್‍ನಿಂದ ಸಂತ ಜೋಸೆಫರ ಪ್ರೌಢಶಾಲೆ ಮೂಲಕ ಬೆಳಗಲ್ ಕ್ರಾಸ್‍ನ ಮಾರ್ಗವಾಗಿ ಕೌಲ್‍ಬಜಾರ್ ಪೊಲೀಸ್ ಠಾಣೆ, ಮೊದಲ ರೈಲ್ವೇ ಗೇಟ್ ಮೂಲಕ ಜೋಳದರಾಶಿ ರಂಗಮಂದಿರದಿಂದ ಮೋತಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು.
ಜಾಥಾದಲ್ಲಿ ಮತದಾನದ ಅರಿವು ಕುರಿತು ಮಾಹಿತಿ ಸಾರುವ ಫಲಕಗಳಲ್ಲಿ 18 ವರ್ಷ ಪೂರೈಸಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿ, ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ 8 ಬಳಸಿ, ಬಂದಿತು, ಬಂದಿತು ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ನೊಂದಾಯಿಸುವುದು ನಮ್ಮೆಲ್ಲರ ಹೊಣೆ, ನಿಮ್ಮ ಹೆಸರು ನೋಂದಾಯಿಸಲು ನಮೂನೆ-6 ಬಳಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು, ಚುನಾವಣಾ ಸಂಬಂಧಿತ ಸಂದೇಹಗಳಿಗೆ 1950 ಮತದಾರರ ಸಹಾಯವಾಣಿಗೆ ಕರೆಮಾಡಿ ಎಂಬ ಘೋಷವಾಕ್ಯಗಳು ವಿಶೇಷವಾಗಿ ಕಂಡುಬಂದವು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಬಳ್ಳಾರಿ ನಗರ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್, ಜಿಲ್ಲಾ ಸ್ವೀಪ್ ಸಮಿತಿಯ ಅಧಿಕಾರಿಗಳು ಹಾಗೂ ಇತರರು ಇದ್ದರು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ