ಮಂಗಳವಾರ, ಏಪ್ರಿಲ್ 11, 2023
ಮತದಾನ ಜಾಗೃತಿ ಅಂಗವಾಗಿ ರೈತರಿಂದ ಎತ್ತಿನ ಬಂಡಿ ಜಾಥಾ ಏ.12ರಂದು
ಬಳ್ಳಾರಿ,ಏ.11(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಸಂಬಂಧ ಮತದಾನ ಜಾಗೃತಿ ಮೂಡಿಸಲು ಏ.12 ರಂದು ಸಂಜೆ 4 ಕ್ಕೆ ತಾಲೂಕಿನ ಕೊಳಗಲ್ಲು ಗ್ರಾಮದ ರೈತರಿಂದ ಎತ್ತಿನ ಬಂಡಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂನ ಯೋಜನಾ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.
ಜಾಥಾವು ಬಳ್ಳಾರಿ ರಸ್ತೆಯ ಸ್ವಾಗತ ಕಮಾನು ಇಲ್ಲಿಂದ ಆರಂಭವಾಗಿ ಗ್ರಾಮದ ಹೊಸಪೇಟೆ ಓಣಿ, ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಅಗಸೆ, ಎಸ್.ಸಿ ಕಾಲೋನಿ, ಯರಂಗಳಿ ಮುಖ್ಯ ರಸ್ತೆ ಮಾರ್ಗವಾಗಿ ಎರ್ರಿತಾತ ದೇವಸ್ಥಾನ ಮುಂಭಾಗ ಮುಕ್ತಾಯವಾಗಲಿದೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ