ಬುಧವಾರ, ಏಪ್ರಿಲ್ 5, 2023

ಸಾರ್ವತಿಕ ವಿಧಾನಸಭಾ ಚುನಾವಣೆ: ದೂರು, ಮಾಹಿತಿ, ಇತರೆ ಸಾರ್ವಜನಿಕ ಕುಂದುಕೊರತೆಗಳಿದ್ದಲ್ಲಿ ಕಂಟ್ರೋಲ್ ರೂಂ ಸಂಖ್ಯೆಗೆ ಸಂಪರ್ಕಿಸಿ* ಬಳ್ಳಾರಿ,ಏ.5(ಕರ್ನಾಟಕ ವಾರ್ತೆ): ರಾಜ್ಯ ಸಾರ್ವತ್ರಿಕ ವಿಧಾನಸಭಾ 2023ರ ಚುನಾವಣೆ ನಡೆಯುವ ಸಂಬಂಧ ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಜಿಲ್ಲೆಯಲ್ಲಿ ಸುಗಮ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ಸಂಬಂಧ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂನ್ನು ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳು, ಮಾಹಿತಿ ಹಾಗೂ ಇತರೆ ಸಾರ್ವಜನಿಕ ಕುಂದುಕೊರತೆಗಳು ಇದ್ದಲ್ಲಿ ಸಹಾಯವಾಣಿ 08392-277100 ಮತ್ತು ಟೋಲ್‍ಫ್ರೀ 1950 ಗೆ ಕರೆ ಮಾಡಿ ತಿಳಿಸಲು ಹಾಗೂ C-Vigil citizen Appನ್ನು ಗೂಗಲ್ ಪ್ಲೇ ಸ್ಟೋರ್ ಮುಖಾಂತರ ಡೌನ್ಲೋಡ್ ಮಾಡಿಕೊಂಡು, ಚುನಾವಣಾ ಅಕ್ರಮಗಳ ಕುರಿತು ಸ್ವತಃ ಸಾರ್ವಜನಿಕರು ಪ್ರಕರಣಗಳನ್ನು ದಾಖಲಿಸಿ, ಜಿಲ್ಲಾಡಳಿತದ ಗಮನಕ್ಕೆ ತಂದು ಪಾರದರ್ಶಕ ರೀತಿಯಲ್ಲಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರು ಭಾಗಿಯಾಗಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆಗೆ 85 ಕರೆ: ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಸಹಾಯವಾಣಿ ಸಂಖ್ಯೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಮತ್ತು ಹೊಸದಾಗಿ ಮತದಾರರ ಪಟ್ಟಿಗೆ ನೊಂದಾಯಿಸಿದ ಅರ್ಜಿಯ ಸ್ಥಿತಿಗತಿ ಮಾಹಿತಿ ಪಡೆಯಲು ಜಿಲ್ಲೆಯಲ್ಲಿ ಒಟ್ಟು 85 ಕರೆಗಳು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ